p>
ಬಂದಾರು: ಬಂದಾರು ಗ್ರಾಮದ ಖಂಡಿಗ ನಾವುಲಿ ರಸ್ತೆಯ ಅಪೂರ್ಣ ಕಾಮಗಾರಿ ಬಗ್ಗೆ ಸುದ್ದಿ ಬಿಡುಗಡೆಯ ವರದಿ ಬಂದ ಬೆನ್ನಲ್ಲೇ ಏಕಾಏಕಿ ಇಂದು ಮರು ಕಾಮಗಾರಿ ಆರಂಭವಾಗಿದೆ.
ಸುದ್ದಿ ವರದಿಗಾರರು ಸ್ಥಳಕ್ಕೆ ಹೋಗಿ ವರದಿ ಮಾಡುತ್ತಾರೆಂಬ ಸುದ್ದಿ ಕೇಳಿದ ಕೂಡಲೇ ಕಾರ್ಮಿಕರು ಆಗಮಿಸಿದ್ದರು.
ಇದಾದ ನಂತರ ಸುದ್ದಿ ವರದಿ ಪ್ರಕಟಿಸಿತು.
ಆದರೆ ಈಗ ಕಾಮಗಾರಿ ಆರಂಭವಾಗಿರುವ ಹಿನ್ನಲೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಖಂಡಿಗ ಸುದ್ದಿಗೆ ಧನ್ಯವಾದ ತಿಳಿಸಿದ್ದಾರೆ.
p>