


ಕಾಯರ್ತಡ್ಕ: ಆರ್.ಎಸ್.ಎಸ್ ನ ಹಿರಿಯ ಮುಖಂಡ, ಅಯೋಧ್ಯೆ ಕರಸೇವಕರಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕಾಯರ್ತಡ್ಕ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷರಾಗಿ ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವವನ್ನು ಯಶಸ್ವಿಯಾಗಿ ನಿರ್ವಹಿಸಿದ ಮೋಹನ್ ಗೌಡ ಪುತ್ಯೆ(64ವ) ಇವರು ಇಂದು(ಫೆ.28) ಮುಂಜಾನೆ ಹೃದಯಾಘಾತದಿಂದ ನಿಧನರಾಗಿರುತ್ತಾರೆ.


ಮೃತರು ಪತ್ನಿ ಸೀತಮ್ಮ, ಪುತ್ರರಾದ ವಿಕ್ರಂ, ಬದ್ರಿನಾಥ್, ದೇವಾನಂದ, ಪುತ್ರಿ ರಾಜೇಶ್ವರಿ ಹಾಗೂ ಅಪಾರ ಬಂಧು-ಬಳಗ, ಕುಟುಂಬಸ್ಥರನ್ನು ಅಗಲಿದ್ದಾರೆ.


 
            