



ಮಡಂತ್ಯಾರು: ದಕ್ಷಿಣ ಕನ್ನಡ ಜಿಲ್ಲೆಯ ಪುರಾತನ ದೇವಿ ದೇವಸ್ಥಾನಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಪಾರೆಂಕಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಅಧಿಕಾರಿಯಾಗಿ ಮಡಂತ್ಯಾರು ಪಂಚಾಯಿತಿನ ಅಭಿವೃದ್ಧಿ ಅಧಿಕಾರಿಯಾದ ಡಾ.ಪ್ರಕಾಶ್ ಎಸ್ ಸರಕಾರದ ವತಿಯಿಂದ ನೇಮಕಗೊಂಡಿರುತ್ತಾರೆ.


ಶ್ರೀ ಕ್ಷೇತ್ರದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಮೋಕ್ತೆಸರರಾದ ಎಮ್.ವಿಠಲ್ ಶೆಟ್ಟಿ ಇವರು ಅಧಿಕಾರವನ್ನು ಹಸ್ತಾಂತರಿಸಿದರು.ಶ್ರೀ ಕ್ಷೇತ್ರದಲ್ಲಿ ಹಿಂದಿನ ಅವಧಿಯಲ್ಲಿ ನಡೆದ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಕ್ಷೇತ್ರದ ನಡಾವಳಿಗಳ ಬಗ್ಗೆ ಪ್ರಧಾನ ಅರ್ಚಕರಾದ ಪೇಜಾವರ ಟಿ.ವಿ.ಶ್ರೀಧರ ರಾವ್ ತಿಳಿಸಿದರು.ಅಧಿಕಾರ ಸ್ವೀಕರಿಸಿದ ಡಾ.ಪ್ರಕಾಶ್ ಎಸ್ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಶ್ಲಾಘಿಸಿದರು.

ಸಭೆಯಲ್ಲಿ ಸಹ ಮೋಕ್ತೆಸರರಾದ ರತ್ನಾಕರ ಶೆಟ್ಟಿ ಮೂಡಯೂರು, ವೇದಾವತಿ ಆಚಾರ್ಯ, ಪುಷ್ಪರಾಜ ಗೌಡ, ಜೀರ್ಣೋದ್ಧಾರ ಕಮಿಟಿಯ ಅಧ್ಯಕ್ಷರಾದ ಕಾಂತಪ್ಪ ಗೌಡ, ಪಂಚಾಯಿತಿಯ ಸದಸ್ಯರಾದ ಕಿಶೋರ್ ಶೆಟ್ಟಿ, ಹರೀಶ್ ಶೆಟ್ಟಿ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.


 
            