ಅರಸಿನಮಕ್ಕಿ: ಅರಿವುನ್ನು ಕಾಪಾಡುವ ಕೇಂದ್ರವಾಗಿದೆ ಅರಿಕೆಗುಡ್ಡೆ ಸರಸ್ವತಿ ಲಕ್ಷ್ಮೀ ದುರ್ಗೆಯರ ಶಕ್ತಿಯನ್ನು ಒಳಗೊಂಡ ಪುಣ್ಯ ಸ್ಥಳವಾಗಿದೆ ಅರಿಕೆಗುಡ್ಡೆ ಉತ್ಸವಗಳು ಸಮಾಜವನ್ನು ಬಲಿಷ್ಠ ಮಾಡುತ್ತದೆ ಎಂದು ಬಾರ್ಕೂರು ಮಹಾಸಂಸ್ಥಾನ ಪೀಠಾಧ್ಯಕ್ಷರು ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷ ಭಾರತಿ ಶ್ರೀಪಾದರು ಆಶೀರ್ವಚನ ನೀಡಿದರು.
ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ವನದುರ್ಗಾ ಕ್ಷೇತ್ರದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭಾ ಕಾರ್ಯಕ್ರಮ ಫೆ.24ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು ಸಂಸ್ಕೃತಿ ಪರಂಪರೆಯನ್ನು ಎಂದಿಗೂ ಕಡೆಗಣಿಸದಿರಿ.
ನಿಶ್ವರ್ಥಾ ಭಾವದಿಂದ ಭಕ್ತಿಯಿಂದ ಭಗವಂತನನ್ನು ಆರಾಧಿಸಬೇಕು.ಆಧುನಿಕ ಕಾಲದಲ್ಲಿ ಪರಂಪರೆಯನ್ನು ಮರೆಚದಂತೆ ದೇವಾಲಯ ನಿರ್ಮಾಣವಾಗಿದೆ.ಸುಂದರವಾಗಿ ಕಂಗೊಳಿಸುತ್ತಿರುವ ಚಪ್ಪರವನ್ನು ಕೊಂಡಾಡಿ ಕ್ಷೇತ್ರದಲ್ಲಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀ ರಂಗ ದಾಮ್ಲೆ ಅಧ್ಯಕ್ಷತೆ ವಹಿಸಿದ್ದರು.ವಿ.ಪ.ಸದಸ್ಯ ಪ್ರತಾಪ್ ಸಿಂಹ ನಾಯಕ್, ಬೆಂಗಳೂರು ಆರ್.ಟಿ.ಓ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಜಯರಾಮ ನೆಲ್ಲಿತ್ತಾಯ, ಪ್ರಗತಿ ಪರ ಕೃಷಿಕ ಶ್ರೀರಮಣ ಭಟ್ ಪಿಲಿಕ್ಕಬೆ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಎಸ್.ಡಿ.ಸಿ.ಸಿ.ಬ್ಯಾಂಕ್ ನ ನಿವೃತ್ತ ಮುಖ್ಯ ವ್ಯವಸ್ಥಾಪಕ ಎಂ.ಶ್ರೀಕರ ರಾವ್ ಅಡ್ಕಾರಿ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಕೇಶವರಾವ್ ನೆಕ್ಕಿಲು, ಆಡಳಿತ ಸಮಿತಿಯ ಅಧ್ಯಕ್ಷ ಪದ್ಮಯ್ಯ ಬಾರಿಗ, ಮಹಿಳಾ ಸಮಿತಿಯ ಸಭೆ ಸಂಚಾಲಕ ಸರೋಜಿನಿ ನಾಯ್ಕ್, ಪ್ರಚಾರ ಸಮಿತಿಯ ಸಂಚಾಲಕ ವೃಷಾಂಕ್ ಖಾಡಿಲ್ಕರ್, ಹಾಗೂ ನೀರಾವರಿ ಮತ್ತು ಬೆಳಕಿನ ವ್ಯವಸ್ಥೆಯ ಸಂಚಾಲಕ ಹರಿಶ್ಚಂದ್ರ ಶೆಟ್ಟಿಗಾರ್ ಪೊಸೋಳಿಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸ್ವಾಗತ ಸಮಿತಿ ಸಂಚಾಲಕ ವಾಮನ್ ತಾಮ್ಹನ್ ಕರ್ ಸ್ವಾಗತಿಸಿದರು.ಅನುರಾಧಾ ಕಾರ್ಯಕ್ರಮ ನಿರೂಪಿಸಿದರು.