ಬೆಳ್ತಂಗಡಿ: ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿರುವ ದೂರುಗಳ ಮೇಲೆ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ನೇತೃತ್ವದಲ್ಲಿ ಉಜಿರೆಯ ಲಾಡ್ಜ್ ಗಳ ಮೇಲೆ ಭಾನುವಾರ ರಾತ್ರಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ.
ಉಜಿರೆಯ ನಾಲ್ಕು ಲಾಡ್ಜ್ ಗಳಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಪೊಲೀಸ್ ಇಲಾಖೆಗೆ ದೂರು ಬಂದ ಹಿನ್ನೆಲೆಯಲ್ಲಿ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದಲ್ಲಿ ಏಳು ಪೊಲೀಸ್ ವಾಹನದಲ್ಲಿ ಏಕಕಾಲದಲ್ಲಿ ಫೆ.18 ರಂದು ರಾತ್ರಿ ದಾಳಿ ಮಾಡಿ ಪರಿಶೀಲನೆ ನಡೆಸಿದ್ದು.ಯಾವುದೇ ಅನೈತಿಕ ಚಟುವಟಿಕೆಗಳು ಕಂಡು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಲಾಡ್ಜ್ ಗಳ ಸಿಸಿಕ್ಯಾಮರ ದಾಖಲೆ ಮತ್ತು ಲೆಕ್ಚರ್ ಪುಸ್ತಕ ಪರಿಶೀಲನೆ ನಡೆಸಿ ಎಚ್ಚರಿಕೆ ನೀಡಿದ್ದಾರೆ.
ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ವಿಜಯ ಪ್ರಸಾದ್ ನೇತೃತ್ವದ ಬಂಟ್ವಾಳ, ಪುಂಜಾಲಕಟ್ಟೆ, ವೇಣೂರು ಪೊಲೀಸರು ತಂಡ ಏಳು ಪೊಲೀಸ್ ವಾಹನದಲ್ಲಿ ಏಕಕಾಲದಲ್ಲಿ ಪೊಲೀಸರು ದಾಳಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.
p>