

ಉಜಿರೆ: ಛತ್ರಪತಿ ಶಿವಾಜಿ ಭಜನಾ ಮಂಡಳಿಯ ನೂತನ ಸಮಿತಿಯ ಪದಗ್ರಹಣ ಕಾರ್ಯಕ್ರಮ ಫೆ.10ರಂದು ರಾಮಕೃಷ್ಣ ಸಭಾಭವನ ಉಜಿರೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಶರತ್ ಕೃಷ್ಣ ಪಡ್ವೆಟ್ನಾಯ, ಸುಧಾಕರ್ ಮತ್ತು ಅರವಿಂದ್ ಕಾರಂತ್ ರವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅಧ್ಯಕ್ಷರಾಗಿ ನಾರಾಯಣ ನಾಯ್ಕ, ಉಪಾಧ್ಯಕ್ಷರಾಗಿ ವಿನೋದ ಕುಂಟಿನಿ, ಕಾರ್ಯದರ್ಶಿಯಾಗಿ ನಾಗೇಶ್ ಕರ್ಕೇರ, ಜೊತೆ ಕಾರ್ಯದರ್ಶಿಯಾಗಿ ಗುರು ಪ್ರಸಾದ್, ಕೋಶಾಧಿಕಾರಿಯಾಗಿ ಮುನಿಷ್, ಲೆಕ್ಕ ಪರಿಶೋಧಕರಾಗಿ ಸುಧಾಕರ್ ಮತ್ತು ಶಿವಪ್ರಸಾದ್ ಸೂರ್ಯ ಇವರನ್ನು ಮುಂದಿನ ಎರಡು ವರ್ಷಕ್ಕೆ ಆಯ್ಕೆ ಮಾಡಲಾಯಿತು.
ಅದೇ ರೀತಿ ಕಾರ್ಯಕ್ರಮದಲ್ಲಿ ಮೋಹನ್ ಲಕ್ಷ್ಮಿ ಗ್ರೂಪ್, ಭರತ್ ಮಹಾಲಕ್ಷ್ಮಿ ಇವರು ನೂತನ ಸಮಿತಿಗೆ ಅತ್ಯಾಮೂಲ್ಯ ಸಲಹೆ ಸೂಚನೆಗಳನ್ನು ನೀಡಿದರು.
ಸಂತೋಷ್ ಅತ್ತಾಜೆ, ಉದಯ ಕುಂಟಿನಿ, ಚಂದ್ರ ಉಜಿರೆ, ಭಜನೆಯ ಮಕ್ಕಳು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.