


ಕುಕ್ಕೇಡಿ: ಸುಡುಮದ್ದು ಸ್ಪೋಟಗೊಂಡ ಸ್ಥಳ ಗೋಳಿಯಂಗಡಿಗೆ ವಿಧಾನ ಪರಿಷತ್ ಸದಸ್ಯಕೆ.ಹರೀಶ್ ಕುಮಾರ್ ಜ.30 ರಂದು ಭೇಟಿ ನೀಡಿದರು.
ಸ್ಥಳದಲ್ಲಿದ್ದ ವೇಣೂರು ಆರಕ್ಷಕ ಠಾಣೆ ಉಪನಿರೀಕ್ಷಕ ಶ್ರೀ ಶೈಲರಿಂದ ಮಾಹಿತಿ ಪಡೆದರು.ನಂತರ ಸ್ಪೋಟದಿಂದ ಭಾದಿತರಾದ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದದರು.


ಬೆಳ್ತಂಗಡಿ ತಹಸೀಲ್ದಾರನ್ನು ಸಂಪರ್ಕಿಸಿ ಸರಕಾರಕ್ಕೆ ವರದಿ ನೀಡಿ ಪರಿಹಾರದ ಭರವಸೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕಾಶಿಪಟ್ನ ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಧರಣೇಂದ್ರ ಕುಮಾರ್,ಶೇಖರ್ ಕುಕ್ಕೇಡಿ, ಪೆರ್ಮುಡ ಕಂಬಳ ಸಮಿತಿ ಅಧ್ಯಕ್ಷ ನಿತೀಶ್ ಕೋಟ್ಯಾನ್, ಕುಕ್ಕೇಡಿ ಪಂಚಾಯತ್ ಸದಸ್ಯರುಗಳಾದ ಗುಣವತಿ, ತೇಜಾಕ್ಷಿ, ಬಳಂಜ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಬಿ. ಆಮೀನ್, ದಯಾನಂದ ಅಲಂತಿಯಾರ್ ವೇಣೂರು, ಪಡ್ಡಂದಡ್ಕ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಕೆ.ಪೆರಿಂಜೆ ಸೇರಿದಂತೆ ಊರ ನಾಗರಿಕರು ಉಪಸ್ಥಿತರಿದ್ದರು.


            





