ಹನುಮ ಧ್ವಜ ತೆರವು ಪ್ರಕರಣ ಖಂಡಿಸಿ ದ.ಕ.ಜಿಲ್ಲಾ ಬಿಜೆಪಿ ಪ್ರತಿಭಟನೆ

0

ಬೆಳ್ತಂಗಡಿ: ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹಾರಿಸಲಾಗಿದ್ದ ಹನುಮ ಧ್ವಜವನ್ನು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು, ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸದಸ್ಯರ ತೀವ್ರ ಪ್ರತಿಭಟನೆಯ ನಡುವೆಯೂ ಭಾನುವಾರ ಜಿಲ್ಲಾಡಳಿತ ತೆರವುಗೊಳಿಸಿತು. ಇದನ್ನು ಖಂಡಿಸಿ, ದ.ಕ. ಜಿಲ್ಲಾ ಬಿಜೆಪಿ ತನ್ನ ಕಚೇರಿ ಮುಂಭಾಗದಲ್ಲಿ ಜ.೨೯ರಂದು ಪ್ರತಿಭಟಿಸಿತು. ಶಾಸಕ ಹರೀಶ್ ಪೂಂಜ, ವಿ.ಪ. ಸದಸ್ಯ ಪ್ರತಾಪಸಿಂಹ ನಾಯಕ್, ಜಿಲ್ಲಾ ಅಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಸತೀಶ್ ಕುಂಪಲ, ಶಾಸಕರುಗಳಾದ ಡಾ. ಭರತ್ ಶೆಟ್ಟಿ, ವೇದವ್ಯಾಸ್ ಕಾಮತ್, ಪ್ರಮಖರಾದ ಸಂಜೀವ ಮಠಂದೂರು, ಆಶಾ ತಿಮ್ಮಪ್ಪ ಗೌಡ ಹಾಗೂ ಪ್ರಮುಖರು ಭಾಗಿಯಾಗಿದ್ದರು.

p>

LEAVE A REPLY

Please enter your comment!
Please enter your name here