ಫೆ.17-19: ರಾಜಕೇಸರಿಯಿಂದ ಬೆಳ್ತಂಗಡಿ ಸಂಭ್ರಮ- ಪತ್ರಿಕಾ ಗೋಷ್ಠಿ

0

ಬೆಳ್ತಂಗಡಿ: ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಘಟಕದ ಆಶ್ರಯದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ. ಬೆಳ್ತಂಗಡಿ ನೇತೃತ್ವದಲ್ಲಿ ಫೆ.17 ರಿಂದ 19ರವರೆಗೆ ಮೂರು ದಿನಗಳ ಕಾಲ ಬೆಳ್ತಂಗಡಿ ಮಾರಿಗುಡಿ ಮೈದಾನದಲ್ಲಿ ಆಹಾರ ಮೇಳದೊಂದಿಗೆ ಬೆಳ್ತಂಗಡಿ ಸಂಭ್ರಮ ಕಾರ್ಯಕ್ರಮ ಜರಗಲಿದೆ ಎಂದು ರಾಜಕೇಸರಿ ಸಂಘಟನೆಯ ಗೌರವ ಸಲಹೆಗಾರ ಪ್ರೇಮರಾಜ್ ರೊಷನ್ ಸಿಕ್ವೇರ ಹೇಳಿದರು.

ಬೆಳ್ತಂಗಡಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಅನೇಕಾ ಸೇವಾ ಕಾರ್ಯಗಳೊಂದಿಗೆ ಮುನ್ನಡೆಯುತ್ತಿರುವ ಸಂಸ್ಥೆಯಾಗಿದ್ದು, ಇದೀಗ 547ನೇ ಸೇವಾ ಕಾರ್ಯಕ್ರಮದಂಗವಾಗಿ ರಾಜಕೇಸರಿ, ಪುತ್ತೂರು ಎಸ್‌ಎಸ್ ಈವೆಂಟ್ ಮ್ಯಾನೇಜ್ ಮೆಂಟ್, ಊರುದ ಫೆಸ್ಟ್ ಮಂಗಳೂರು ಸಹಯೋಗದೊಂದಿಗೆ ಬೆಳ್ತಂಗಡಿ ಸಂಭ್ರಮ ಆಯೋಜಿಸಲಾಗಿದೆ.

ಕಾರ್ಯಕ್ರಮದಲ್ಲಿ 100 ಸ್ಟಾಲ್‌ಗಳಿರಲಿದ್ದು, ಅವುಗಳಲ್ಲಿ 60ವಿವಿಧ ಬಗೆಯ ಖಾದ್ಯ, ಕೃಷಿ ಮೇಳ, ವಾಹನ ಮೇಳ, ಸಾವಯವ ಉತ್ಪನ್ನ ಮೇಳ ಜರಗಲಿದೆ.

ಜ.17ರಂದು ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದ್ದು, ಮೂರ ದಿನಗಳ ಕಾಲ ಬೆಳಗ್ಗೆಯಿಂದ ರಾತ್ರಿ 10 ಗಂಟೆಯವರೆಗೆ ಸ್ಟಾಲ್‌ಗಳು ತೆರೆದಿರುತ್ತವೆ.ವೇದಿಕೆಯಲ್ಲಿ ಪ್ರತಿನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.ತಾಲೂಕಿನ ಶಿಕ್ಷಕರಿಗೆ ಜ.18ರಂದು ರವಿವಾರ ಮನೋರಂಜನಾ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಸ್ಟಾಲ್ ಅಳವಡಿಸಲು ಬೆಳ್ತಂಗಡಿಯವರಿಗೆ ಮೊದಲ ಆಧ್ಯತೆಯಾಗಿದ್ದು, ಸಂಘಟನೆಯವರನ್ನು ಸಂಪರ್ಕಿಸಬಹುದಾಗಿದೆ. ಕಾರ್ಯಕ್ರಮದಿಂದ ಬಂದ ಆದಾಯದಲ್ಲಿ 547ನೇ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಪತ್ರಿಕಾ ಗೋಷ್ಠಿಯಲ್ಲಿ ರಾಜಕೇಸರಿ ಸಂಘಟನೆ ಸಂಸ್ಥಾಪಕ ದೀಪಕ್ ಜಿ., ಆಯೋಜಕ ಪುತತ್ತೂರಿನ ಶಿವಪ್ರಸಾದ್ , ಅಚಲ್ ವಿಟ್ಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here