ಪಿಲ್ಯ: ಗುಡ್ ಫ್ಯುಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಗಣರಾಜ್ಯೋತ್ಸವ

0

ಪಿಲ್ಯ: ಗುಡ್ ಫ್ಯುಚರ್ ಚೈಲ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಊರಿನ ಖ್ಯಾತ ವೈದ್ಯೆ ಸುಷ್ಮಾ ಡೋಂಗ್ರೆಯವರು ಕಾರ್ಯಕ್ರಮದ ಅತಿಥಿಯಾಗಿ ಪಾಲ್ಗೊಂಡಿದ್ದರು.ಇವರು ದ್ವಜಾರೋಹಣವನ್ನು ನೆರವೆರಿಸಿದರು.

ಕಾರ್ಯಕ್ರಮವು ಪಥಸಂಚಲನದೊಂದಿಗೆ ಅಚ್ಚುಕಟ್ಟಾಗಿ ಮೂಡಿ ಬಂತು.ಕಾರ್ಯಕ್ರಮದ ಅದ್ಯಕ್ಷತೆಯನ್ನು ಸಂಚಾಲಕರಾದ ನಸೀರ್ ಅಹಮದ್ ಖಾನ್ ರವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಎಸ್.ಸಿ.ಡಿ.ಎಂ.ಸಿ ಉಪಾದ್ಯಕ್ಷರಾದ ವೀರೇಂದ್ರ ಕುಮಾರ್ ಜೈನ್ ಮತ್ತು ಸದಸ್ಯದರಾದ ಧನಕೀರ್ತಿ ಜೈನ್ ರವರು ಪಾಲ್ಗೊಂಡಿದ್ದರು.ಮಕ್ಕಳಿಗೆ ಗಣರಾಜ್ಯ ದಿನದ ಮಹತ್ವ ತಿಳಿಸಲಾಯಿತು.

ನಂತರ ಸಿಹಿ ಹಂಚಲಾಯಿತು.ಶಾಲಾ ಮುಖ್ಯೋಪಾಧ್ಯಾಯಿನಿ ನಿರ್ಮಲ ಅವರು ಸ್ವಾಗತಿಸಿದರು.ಶಿಕ್ಷಕಿ ಲಕ್ಷ್ಮಿ ವಂದಿಸಿದರು.

LEAVE A REPLY

Please enter your comment!
Please enter your name here