ಬಂಗೇರಕಟ್ಟೆ, ನೆತ್ತರ ರಸ್ತೆ ಸಂಚಾರ ತ್ರಾಸದಾಯಕ

0

ವರದಿ: ಹರ್ಷ ಬಳ್ಳಮಂಜ
ಮಚ್ಚಿನ: ಮಚ್ಚಿನ ಮತ್ತು ಮಡಂತ್ಯಾರು ಗ್ರಾ.ಪಂ.ವ್ಯಾಪ್ತಿಗೆ ಒಳಪಡುವ ಬಂಗೇರಕಟ್ಟೆ ಮತ್ತು ನೆತ್ತರ ರಸ್ತೆಯ ಡಾಮರು ಎದ್ದು ಹೋಗಿ ಮಣ್ಣಿನ ರಸ್ತೆಯಾಗಿದೆ.ಈ ರಸ್ತೆಗೆ ಡಾಮರೀಕರಣ ಭಾಗ್ಯ ಯಾವಾಗ ಎಂದು ಜನರು ಪ್ರಶ್ನಿಸುತ್ತಿದ್ದಾರೆ.ಈ ಭಾಗದ ಜನರು ಚುನಾವಣೆಯ ಸಂದರ್ಭದ ಭರವಸೆ ನಂಬಿ ರಸ್ತೆಗೆ ಡಾಮರೀಕರಣಕ್ಕೆ ಕಾಯುತ್ತಿದ್ದಾರೆ.ಇತ್ತೀಚೆಗೆ ನೆತ್ತರ ಶಾಲೆ ಬೆಳ್ಳಿಹಬ್ಬ ಆಚರಿಸಿದ್ದು ಊರಿಗೆ ಸಂತಸದ ವಿಷಯ.ಆದರೆ ರಸ್ತೆಯಲ್ಲಿ ಸಂಚಾರ ತ್ರಾಸದಾಯಕವಾಗಿದೆ.

ನೆತ್ತರದಿಂದ ಬಂಗೇರಕಟ್ಟೆಯವರೆಗೆ ರಸ್ತೆಯ ಚರಂಡಿ ಪೊದೆಗಳ ಸ್ವಚ್ಚತೆಯನ್ನು ಪ್ರತಿ ವರ್ಷ ಭಾಗ್ಯಶ್ರೀ ಮಿತ್ರ ಮಂಡಳಿ ಹಾಗೂ ಸ್ಥಳೀಯರ ಸಹಕಾರದಿಂದ ಮಾಡಲಾಗುತ್ತಿದೆ.ಆದರೆ ಈ ರಸ್ತೆಯ ಸ್ಥಿತಿ ನೋಡುವವರಿಲ್ಲದಂತಾಗಿದೆ.ಈ ರಸ್ತೆ ಬಂಗೇರಕಟ್ಟೆ, ನೆತ್ತರ, ಮಾನ್ಯ, ಮುಂದಿಲ, ಬಿಜಿಲ, ಪಾಲೇದು, ಪಾಂಡವಕಲ್ಲು, ಕುದ್ರಡ್ಕ ಮತ್ತು ತಣ್ಣೀರುಪಂತ ಭಾಗದ ಪ್ರದೇಶಗಳಿಗೆ ಸಂರ್ಪಕ ಕೊಂಡಿಯಾಗಿದೆ.ಈ ರಸ್ತೆಗೆ ಡಾಮರೀಕರಣ ಆಗದಿರುವುದು ಶೋಚನೀಯ.ಈ ಭಾಗದ ಜನರಿಗೆ ತುರ್ತು ಅರೋಗ್ಯದ ಸಮಸ್ಯೆಗಳು ಬಂದಾಗ ವಾಹನಗಳು ಬರಲು ಹಿಂದೇಟು ಹಾಕುವ ಸ್ಥಿತಿ ನಿರ್ಮಾಣಗೊಂಡಿದೆ.ದಿನನಿತ್ಯ ಕೂಲಿ ಕೆಲಸಗಳಿಗೆ ಶಾಲಾ ಮಕ್ಕಳು ಶಾಲೆಗೆ ತೆರಳಲು ಸಮಯಕ್ಕಿಂತ ಮುಂಚಿತವಾಗಿ ಸಿದ್ಧರಾಗಬೇಕಾಗಿದೆ. ಎಷ್ಟೇ ಅಪಘಾತಗಳು ರಸ್ತೆಯಲ್ಲಿ ನಡೆದರೂ ಕಣ್ಣು ಮುಚ್ಚಿ ಕೂತಿರುವ ಗ್ರಾ.ಪಂ., ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸಿ ರಸ್ತೆಯನ್ನು ಅಭಿವೃದ್ಧಿ ಗೊಳಿಸಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

p>

LEAVE A REPLY

Please enter your comment!
Please enter your name here