ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ರಜತ ಸಂಭ್ರಮದ ಪ್ರಯುಕ್ತ ನಡೆಯುತ್ತಿರುವ ವಿವಿದ ಕಾರ್ಯಕ್ರಮಗಳ ಅಂಗವಾಗಿ ನಡೆಯುತ್ತಿರುವ ಕ್ರೀಡೋತ್ಸವದ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮ ಕೇಂದ್ರಗಳ ತಂಡಗಳಿಗಾಗಿ ಹೊನಲು ಬೆಳಕಿನ ಫುಟ್ಬಾಲ್ ಮತ್ತು ಶಟಲ್ ಬಾಡ್ಮಿಂಟನ್ ಪಂದ್ಯಾಟ ಜ.14ರಂದು ನೆಲ್ಯಾಡಿ ಗಾಂಧಿ ಮೈದಾನದಲ್ಲಿ ನಡೆಯಿತು.
ಆದಿತ್ಯವಾರ ಸಂಜೆ ಬೆಳ್ತಂಗಡಿ ಧರ್ಮಾಧ್ಯಕ್ಷರಾದ ಪರಮ ಪೂಜ್ಯ ಅತಿ ವಂದನಿಯ ಲಾರೆನ್ಸ್ ಮುಕ್ಕುಯಿ ಅವರು ಪಂದ್ಯಾಟವನ್ನು ಉದ್ಘಾಟನೆ ಮಾಡಿದರು.ಜೊತೆಯಾಗಿ ಮತ್ತು ಹಿತವಾಗಿ ಬೆಳೆಯಲು ಕ್ರೀಡೆ ಹೆಚ್ಚು ಪರಿಣಾಮಕಾರಿ ಎಂದು ತಮ್ಮ ಆಶೀರ್ವಚನದಲ್ಲಿ ಧರ್ಮಾಧ್ಯಕ್ಷರು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ವಂದನಿಯ ಲಾರೆನ್ಸ್ ಪೂಣೋಲಿಲ್, ವಂದನಿಯ ಫಾ.ಬಿಬಿನ್, ಹಿರಿಯ ಪತ್ರಕರ್ತ ಶಿಬಿ ಧರ್ಮಸ್ಥಳ, ಧರ್ಮಸ್ಥಳ ಹಾಲು ಉತ್ಪಾದನ ಸಹಕಾರಿ ಸಂಘದ ಅಧ್ಯಕ್ಷ ತಂಗಚನ್, ನೆಲ್ಯಾಡಿ ಚರ್ಚ್ ನ ಟ್ರಸ್ಟಿಗಳಾದ ಈಪನ್ ವರ್ಗೀಸ್ ಬಿಜು, ಟೊಮಿ ಮಟ್ಟಮ್, ಜೋಬಿನ್ ಪರಪರಾಗತ್ ಆರ್ಲದ ಮನು ಜೇಮ್ಸ್ ಪುಳಿಕ್ಕಲ್ ಕ್ರೀಡಾಕೂಟ ವ್ಯವಸ್ಥಾಪನ ಸಮಿತಿಯ ನಿಖಿಲ್ ಧರ್ಮಸ್ಥಳ, ನವೀನ್ ವಾಯಕ್ಕಾಲ, ಜೈಸನ್, ಎಸ್ ಎಂ ವೈ ಎಂ ಅಧ್ಯಕ್ಷರು ನೆಲ್ಯಾಡಿ, ಶಿಬು ಪನಚಿಕ್ಕಲ್ ಕೆ ಎಸ್ ಎಂ ಸಿ ಎ ಅಧ್ಯಕ್ಷರು ನೆಲ್ಯಾಡಿ, ಜೈಸನ್ ಪಟ್ಟೀರಿ ಅಧ್ಯಕ್ಷರು ಕೆ ಎಸ್ ಎಂ ಸಿ ಎ ಧರ್ಮಸ್ಥಳ ಫೋರೋನ, ಜಿನೋಯ್ ಮೈತೋಟ್ಟತಿಲ್, ರಿಯಾ ರಬ್ಬೆರ್ಸ್ ನೆಲ್ಯಾಡಿ ಬೇಬಿ ವಾಯಕ್ಕಾಲ ನವೀನ್ ಟ್ರೇಡರ್ಸ್ ನೆಲ್ಯಾಡಿ ಉಪಸ್ಥಿತರಿದ್ದರು.
ಕೆ ಎಸ್ ಎಂ ಸಿ ಎ ಧರ್ಮ ಪ್ರಾಂತಿಯ ನಿರ್ದೇಶಕರಾದ ವಂದನಿಯ ಫಾ.ಶಾಜಿ ಮಾತ್ಯು ಸ್ವಾಗತಿಸಿ, ರೋಬಿನ್ ಧರ್ಮಸ್ಥಳ ವ್ಯವಸ್ಥಾಪನ ಸಮಿತಿ ವಂದನಾರ್ಪಣೆಗೈದರು. ಫುಟ್ಬಾಲ್ ಪಂದ್ಯಾಟದಲ್ಲಿ 21 ತಂಡಗಳು ಭಾಗವಹಿಸಿದ್ದಲ್ಲಿ 51 ತಂಡಗಳು ಶಟಲ್ ಬಾಡ್ಮಿಂಟನ್ ನಲ್ಲಿ ಬಾಗವಹಿಸಿದರು.ಉಡುಪಿ ಜಿಲ್ಲೆಯ ಮುದೂರಿನ ಸೆಂಟ್ ಮೇರಿಸ್ ತಂಡ ಪ್ರಶಸ್ತಿಯನ್ನು, ಧರ್ಮಸ್ಥಳ ಸೆಂಟ್ ಜೋಸೆಫ್ ತಂಡ ರನ್ನರ್ಸ್ಅಪ್ ಪ್ರಶಸ್ತಿಯನ್ನು ಬಾಡ್ಮಿಂಟನ್ ವಿಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ತೋಟತ್ತಾಡಿ ಸೆಂಟ್ ಆಂಟಣಿ ಚರ್ಚ್ ತೃತೀಯ ಸ್ಥಾನವನ್ನು, ಕಂಕನಾಡಿ ಅಲ್ಫೋನ್ಸ ಚರ್ಚ್ ಹಾಗೂ ಬಜಗೋಳಿ ಸೆಂಟ್ ಮೇರಿಸ್ ತಂಡಗಳು ಹಂಚಿಕೊಂಡವು.