ಬೆಳ್ತಂಗಡಿ: ಎರಡು ವರ್ಷಗಳ ಹಿಂದೆ ಕೊರೋನಾ ಸಂದರ್ಭದಲ್ಲಿ ವಾಟ್ಸಾಪ್ ಗ್ರೂಪ್ ನಿಂದ ಹುಟ್ಟಿಕೊಂಡ ಸಂಸ್ಥೆ ಸ್ಪಂದನ ಬಂಟರ ಸೇವಾ ತಂಡ.2 ವರ್ಷದಲ್ಲಿ 24 ಸೇವಾ ಕಾರ್ಯಕ್ರಮದಲ್ಲಿ ಸುಮಾರು 3.5 ಲಕ್ಷ ಧನಸಹಾಯವನ್ನು ಬಡವರಿಗೆ ವಿತರಿಸಿದ ಸಂಸ್ಥೆಯಾಗಿದೆ.
ಸ್ಪಂದನ ಬಂಟರ ಸೇವಾ ತಂಡದ 25ನೇ ಸೇವಾ ಕಾರ್ಯಕ್ರಮ ಜ.15ರಂದು ಗುರುವಾಯನಕೆರೆ ಬಂಟರ ಭವನದಲ್ಲಿ ಶಾಸಕ ಹರೀಶ್ ಪೂಂಜ ಉದ್ಘಾಟಿಸಿ ಶುಭಹಾರೈಸಿದರು.
ಕಾರ್ಯಮದಲ್ಲಿ ಬೆಳ್ತಂಗಡಿ ಸ್ಪಂದನ ಬಂಟರ ಸೇವಾ ತಂಡದ ಗೌರವಾಧ್ಯಕ್ಷ ಶಶಿಧರ ಶೆಟ್ಟಿ ನವಶಕ್ತಿ, ಬೆಳ್ತಂಗಡಿ ಬಂಟರ ಯಾನೆ ನಾಡವರ ಸಂಘ (ರಿ.)ದ ಅಧ್ಯಕ್ಷ ಜಯರಾಮ ಶೆಟ್ಟಿ ಮುಂಡಾಡಿಗುತ್ತು, ಲಾಯಿಲ ಬಂಟರ ಗ್ರಾಮ ಸಮಿತಿಯ ಅಧ್ಯಕ್ಷ ಜನಾರ್ದನ ಶೆಟ್ಟಿ ಪೆರಿಂದಿಲೆ ಉಪಸ್ಥಿತರಿದ್ದರು.
ಸ್ಪಂದನ ಬಂಟರ ಸೇವಾ ತಂಡದ ಅಧ್ಯಕ್ಷ ಸುರೇಶ್ ಶೆಟ್ಟಿ ಲಾಯಿಲ ಸ್ವಾಗತಿಸಿ, ಪ್ರಕಾಶ್ ಶೆಟ್ಟಿ ನಿರೂಪಿಸಿ, ಕಿರಣ್ ಶೆಟ್ಟಿ ವಂದಿಸಿದರು.
ಕೋಶಾಧಿಕಾರಿ ಸುರೇಶ್ ಶೆಟ್ಟಿ ಪಾಲ್ತ್ಯಾರ್, ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಭಾಗವಹಿಸಿದ್ದರು.
p>