ಬೆಳ್ತಂಗಡಿ: ರಬ್ಬರ್ ಬೊರ್ಡ್ ಕೋಟ್ಟಾಯಂ, ಮತ್ತು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಮುಂಡಾಜೆ ಇವರ ಜಂಟಿ ಆಶ್ರಯದಲ್ಲಿ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಹಾಗೂ ವಿವಿಧ ಸ್ವಸಹಾಯ ಸಂಘಗಳ ಸದಸ್ಯರ ಕೂಡುವಿಕೆಯೊಂದಿಗೆ ಯಂಗ್ ಚಾಲೆಂಜರ್ಸ್ ಭವನದಲ್ಲಿ ಒಂದು ದಿನದ ಅಣಬೆ ಕೃಷಿ ಪ್ರಾತ್ಯಕ್ಷಿಕೆ ಹಾಗೂ ತರಬೇತಿ ಕಾರ್ಯಾಗಾರ ನಡೆಯುತು.
ಸಮಾರಂಭದ ಅಧ್ಯಕ್ಷತೆಯನ್ನು ರಬ್ಬರ್ ಪ್ರೊಡ್ಯೂಸರ್ಸ್ ಸೊಸೈಟಿ ಮುಂಡಾಜೆ ಇದರ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಹೊಸಗದ್ದೆ ವಹಿಸಿದ್ದರು.
ಸಂಪನ್ಮೂಲ ವ್ಯಕ್ತಿಯಾಗಿ ಸಿಪಿಸಿಆರ್‌ಐ ಸಂಸ್ಥೆಯ ಪಾಂಡುರಂಗ ಮಂಗಳೂರು, ರಬ್ಬರ್ ಬೋರ್ಡ್ ನ ರಿಜಿನಲ್ ಕಚೇರಿಯಾ ರಬ್ಬರ್ ಪ್ರೊಟೆಕ್ಷನ್ ಕಮಿಷನರ್ ಶೃಜಾ ಟಿ.ಪಿ, ಅಸಿಸ್ಟೆಂಟ್ ಡೆವಲಪ್ಮೆಂಟ್ ಅಫೀಸರ್ ರೋಶನಿ ಇವರು ಭಾಗಿಯಾಗಿದ್ದು ತರಬೇತಿ ನಡೆಸಿಕೊಟ್ಟರು.
ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಸಂಚಾಲಕ ನಾಮದೇವ ರಾವ್ ಸ್ವಾಗತಿಸಿದರು.ಗೌರವ ಸಲಹೆಗಾರ ಬಾಬು ಪೂಜಾರಿ ಕೂಳೂರು ವಂದಿಸಿದರು.ಕಾರ್ಯದರ್ಶಿ ಲಕ್ಷ್ಮಣ್ ನಾಯ್ಕ್ ನಿರೂಪಿಸಿದರು.
ಯಂಗ್ ಚಾಲೆಂಜರ್ಸ್ ಪದಾಧಿಕಾರಿಗಳು ಹಾಗೂ 40 ಕ್ಕೂ ಅಧಿಕ ಮಂದಿ ತರಬೇತಿಯ ಪ್ರಯೋಜನ ಪಡೆದರು.