ಮುಂಡಾಜೆ ಗ್ರಾಮದ ಸೋಮಂತಡ್ಕ ಪೇಟೆಯಲ್ಲಿ ಡಿ.28ರಂದು ಡ್ರೋನ್ ಹಾರಾಟ ನಡೆಸಿರುವುದು ಇಲ್ಲಿನ ಜನರಲ್ಲಿ ಆತಂಕಕ್ಕೆ ಕಾರಣವಾಯಿತು.
ಮಧ್ಯಾಹ್ನ 11ರ ಸುಮಾರಿಗೆ ಇಲ್ಲಿಗೆ ಆಗಮಿಸಿದ ತಮಿಳು ಮಾತನಾಡುತ್ತಿದ್ದ ಇಬ್ಬರು ವ್ಯಕ್ತಿಗಳು ಹಾಗೂ ಇನ್ನೋರ್ವ ಇಲ್ಲಿನ ಪೇಟೆ ಸಮೀಪದ ಮೈದಾನ ಒಂದರಲ್ಲಿ ಡ್ರೋನ್ ಹಾರಾಟ ನಡೆಸಿದರು.ಈ ಬಗ್ಗೆ ಜನರು ಪ್ರಶ್ನಿಸಿದಾಗ ತಾವು ಕೃಷಿ ಸಂಬಂಧಿ ಸಿಂಪಡಣೆ ಬಗ್ಗೆ ಪ್ರಾತ್ಯಕ್ಷಿಕೆ ನಡೆಸುತ್ತಿರುವುದಾಗಿ ತಿಳಿಸಿ ಸಮರ್ಪಕ ಉತ್ತರವನ್ನು ನೀಡದೆ ಅಲ್ಲಿಂದ ತೆರಳಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಸರ್ವೆ ಇಲಾಖೆ, ತೋಟಗಾರಿಕೆ ಇಲಾಖೆಯನ್ನು ವಿಚಾರಿಸಿದ್ದು ಈ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಿಲ್ಲ.ಸ್ಥಳೀಯ ಗ್ರಾಮ ಪಂಚಾಯತ್ ಗೆ ಕೂಡ ಮಾಹಿತಿ ನೀಡದಿರುವುದರಿಂದ ಇದು ಯಾರ ಅನುಮತಿ ಪಡೆದು ನಡೆಸಿದ ಪ್ರಾತ್ಯಕ್ಷಿಕೆ ಹಾಗೂ ಯಾಕಾಗಿ ನಡೆದಿದೆ ಎಂಬುದು ಯಕ್ಷಪ್ರಶ್ನೆಯಾಗಿದೆ.
p>