ಉಜಿರೆ: ವ್ಯವಹಾರದ ಆರಂಭದಲ್ಲಿ ಮೊದಲಿಗೆ ನೀವು ಜನರ ಬಳಿಗೆ ತೆರಳಬೇಕು, ನಿಮ್ಮ ಬಗ್ಗೆ ನಿಮಗೆ ಗೌರವ ಇರಬೇಕು ಹಾಗೆಯೇ ಹೆತ್ತವರು ಹೆಮ್ಮೆ ಪಡುವಂತಿರಬೇಕು.ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದರ ಜೊತಗೆ ಕೆಲಸದಲ್ಲಿ ಗುಣಮಟ್ಟ ಕಾಯ್ದುಕೊಳ್ಳಿ.ರುಡ್‌ಸೆಟ್‌ನಲ್ಲಿ ನಡೆಯುವ ತರಬೇತಿಗಳು ವೃತ್ತಿ ಜೀವನಕ್ಕೆ ಸಹಕಾರಿಯಾಗುವುದರ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಸಹಾಯವಾಗುತ್ತದೆ.
ಇಲ್ಲಿ ಕಲಿಸುವ ಯೋಗಾಸನ ಮತ್ತು ಶ್ರಮಧಾನ ಇವುಗಳನ್ನು ನಿಮ್ಮ ಮುಂದಿನ ಜೀವನದಲ್ಲೂ ಅಳವಡಿಸಿಕೋಳ್ಳಿ ಎಂದು ಉಜಿರೆಯ ಎಸ್‌ಡಿಎಮ್ ಹಾಸ್ಪಿಟಲ್‌ನ ನಿರ್ದೇಶಕರು ಮತ್ತು ರುಡ್‌ಸೆಟ್ ಸಂಸ್ಥೆಗಳ ಹಿಂದಿನ ಕಾರ್ಯ ನಿರ್ವಾಹಕ ನಿರ್ದೇಶಕ ಎಂ ಜನಾರ್ಧನ್ ರವರು ಅಭಿಪ್ರಾಯ ಪಟ್ಟರು.
ಅವರು ರುಡ್‌ಸೆಟ್ ಸಂಸ್ಥೆಯಲ್ಲಿ 30 ದಿನಗಳ ಕಾಲ ನಡೆದ ಮಹಿಳೆಯರ ವಸ್ತ್ರ ವಿನ್ಯಾಸ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಎಮ್. ಸುರೇಶ್‌ರವರು ಅಧ್ಯಕ್ಷ ಸ್ಥಾನ ವಹಿಸಿದ್ದರು, ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್‌ರವರು ಕಾರ್ಯಕ್ರಮ ನಿರೂಪಿಸಿ, ಹಿರಿಯ ಉಪನ್ಯಾಕರಾದ ಅನಸೂಯ ವಂದಿಸಿದರು.ಕೆಲವು ಶಿಭಿರಾರ್ಥಿಗಳು ತರಬೇತಿಯ ಅನಿಸಿಕೆಯನ್ನು ವ್ಯಕ್ತಪಡಿಸಿದರು.