



ಕಲ್ಮಂಜ: ಉಳ್ಳಾಯ ಉಳ್ಳಾಲ್ತಿ ದೈವಸ್ಥಾನ ಪರಾರಿ ಮಜಲ್ ಗುಂಡ ಕಲ್ಮಂಜ ಇದರ ನೂತನ ದೇಗುಲದ ಶಿಲನ್ಯಾಸ ಕಾರ್ಯಕ್ರಮನ್ನು ಉಜಿರೆ ಲಕ್ಷ್ಮಿ ಗ್ರೂಪ್ ಮಾಲಕ ಮೋಹನ್ ಕುಮಾರ್ ಉಜಿರೆ ಹಾಗೂ ಪ್ರಭಾಕರ್ ಶೆಟ್ಟಿ ಕಂದೂರು ಇವರು ನೆರವೇರಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಚೆನ್ನಪ್ಪ ಗೌಡ ಕರಿಯನೆಲ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ವೆಂಕಟರಮಣ ಹೆಬ್ಬಾರ್, ಸಮಿತಿಯ ಸದಸ್ಯರುಗಳು, ಮುಂಡಾಜೆ ಸಿಎ ಬ್ಯಾಂಕಿನ ಸದಸ್ಯ ಶಶಿಧರ್ ಕಲ್ಮಂಜ, ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೃಷ್ಣಪ್ಪ ಗುಡಿಗಾರ್, ತುಕಾರಾಂ ಸಾಲಿಯಾನ್, ಹಿರಿಂಬಿ ಸೀತಾರಾಮ್ ಭಟ್ ಇವರೆಲ್ಲರೂ ಉಪಸ್ಥಿತರಿದ್ದರು.


ಹಾಗೆಯೇ ಪೂಜಾ ಕಾರ್ಯವನ್ನು ಅರ್ಚಕ ರವಿ ಭಟ್ ಪಜಿರಡ್ಕ, ರಘುರಾಮ್ ದಡ್ಡು ಮನೆ, ಇವರು ನೆರವೇರಿಸಿದರು.ಊರ-ಪರಊರ ಎಲ್ಲ ಭಕ್ತಾಭಿಮಾನಿಗಳು ಕಾರ್ಯಕ್ರಮದಲ್ಲಿ ಭಾಗಿಯಾದರು.
ಕಾರ್ಯಕ್ರಮದಲ್ಲಿ ಪರಾರಿ ವೆಂಕಟರಮಣ ಹೆಬ್ಬಾರ್ ಸ್ವಾಗತಿಸಿ, ಪ್ರಸ್ತಾವಿಕ ಮಾತು ಮತ್ತು ಧನ್ಯವಾದನ್ನು ಶ್ರೀನಿವಾಸ್ ರಾವ್ ನೆರವೇರಿಸಿದರು.


 
            