


ಬೆಳ್ತಂಗಡಿ ಅಭಯ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ತಿಮ್ಮಯ್ಯ ಅವರ ನೇತೃತ್ವದಲ್ಲಿ ಅಧಿಕಾರಿ ತಂಡವು ತಪಾಸಣೆಯನ್ನು ನಡೆಸಿದ ವೇಳೆ ನೋಂದಣಿ ಮಾಡದೆ ಬಳಕೆ ಮಾಡುತ್ತಿದ್ದ ಸ್ಕ್ಯಾನಿಂಗ್ ಯಂತ್ರ ಕಂಡು ಬಂದಿದೆ.


ಸ್ಕ್ಯಾನಿಂಗ್ ಯಂತ್ರವನ್ನು ಬಳಸಲು ನಿಯಮಾನುಸಾರ ಆರೋಗ್ಯ ಇಲಾಖೆಯಲ್ಲಿ ನೊಂದಣಿ ಮಾಡದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ತಕ್ಷಣವೇ ಸ್ಕ್ಯಾನಿಂಗ್ ಯಂತ್ರವನ್ನು ವಶಪಡಿಸಿಕೊಂಡು ಜಪ್ತಿ ಮಾಡಲಾಯಿತು.


 
            