ಇಂದಬೆಟ್ಟು: ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಂದಬೆಟ್ಟು ಇಲ್ಲಿನ ವಾರ್ಷಿಕೋತ್ಸವವು ಡಿ.23ರಂದು ಧ್ವಜಾರೋಹಣ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಂಡಿತು.
ಹರೀಶ್ ಕುಮಾರ್ ವಿಧಾನ ಪರಿಷತ್ ಶಾಸಕರು ಕರ್ನಾಟಕ ಸರ್ಕಾರ ಇವರು ಶಾಲಾ ವಾರ್ಷಿಕೋತ್ಸವದ ಧ್ವಜಾರೋಹಣ ಮಾಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಸಂಜೆಯ ಸಭಾ ಕಾರ್ಯಕ್ರಮವು ದೀಪ ಬೆಳಗಿಸುವುದರೊಂದಿಗೆ ಪ್ರಾರಂಭಗೊಂಡಿತು.
ಗ್ರಾಮ ಪಂಚಾಯತ್ ಇಂದಬೆಟ್ಟು ಇಲ್ಲಿನ ಅಧ್ಯಕ್ಷೆ ಆಶಾಲತಾ ಗುಡಿಗಾರ್ ಇವರ ಅಧ್ಯಕ್ಷತೆಯೊಂದಿಗೆ ಸಭಾ ಕಾರ್ಯಕ್ರಮವು ಜರುಗಿತು.
ವೇದಿಕೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಆನಂದ ಅಡಿಲು, ಗ್ರಾಮ ಪಂಚಾಯತ್ ಸದಸ್ಯೆಯಾದ ಜಯಂತಿ, ನವ ಭಾರತ್ ಗೆಳೆಯರ ಬಳಗದ ಗೌರವ ಅಧ್ಯಕ್ಷ ಅರುಣ್ ಕುಮಾರ್ ಕಲ್ಲಾಜೆ, ಅಶ್ವತ್ ರಾಜ್ ಕಲ್ಲಾಜೆ, ರಘು ಆಚಾರಿ, ಗಣೇಶ್ ಗೌಡ ಕಲ್ಲಾಜೆ, ರಮೇಶ್ ಕೆಂಗಾಜೆ, ವಾಮನ ಗೌಡ ಕೊಯಮಜಲು, ಸಿಎ ಬ್ಯಾಂಕ್ ನಿರ್ದೇಶಕರಾದ ಲಕ್ಷ್ಮಣ ಗೌಡ, ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಆರೋಗ್ಯ ಕ್ಲಿನಿಕ್ ವೈದ್ಯರಾದ ಡಾಕ್ಟರ್ ಪ್ರದೀಪ್, ನಿವೃತ್ತ ಮುಖ್ಯ ಶಿಕ್ಷಕಿ ಚಿತ್ರ, ವಿಮುಕ್ತಿಯ ಮೇಲ್ವಿಚಾರಕರಾದ ಮೋಹಿನಿ, ಪ್ರಭಾರ ಮುಖ್ಯ ಶಿಕ್ಷಕಿ ದೀಪಾ ಹಾಗೂ ತಾಲೂಕು ಪ್ರಾಥಮಿಕ ಸಂಘದ ಅಧ್ಯಕ್ಷರಾದ ಕಿಶೋರ್ ಕುಮಾರ್ ಎಚ್.ಕೆ ಇವರು ಉಪಸ್ಥಿತರಿದ್ದರು.
ಕಜೆ ಮತ್ತು ಕಲ್ಲಾಜೆ ಅಂಗನವಾಡಿ ಪುಟಾಣಿಗಳಿಂದ ಚಿಣ್ಣರ ಚಿಲಿಪಿಲಿ ಕಾರ್ಯಕ್ರಮವು ಜರುಗಿತು.ನಂತರ ಶಾಲಾ ಮಕ್ಕಳಿಂದ ನೃತ್ಯ ವೈವಿಧ್ಯ ಕಾರ್ಯಕ್ರಮವು ಜರಗಿತು.ಹಿರಿಯ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಿರಿಯ ವಿದ್ಯಾರ್ಥಿಗಳಿಂದ ಕಥೆ ಏರ್ ಬರೆಪೆರ್ ಎಂಬ ನಾಟಕವು ಪ್ರದರ್ಶನಗೊಂಡಿತು.ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ಸಂಪನ್ನಗೊಂಡಿತು.ಈ ಕಾರ್ಯಕ್ರಮದಲ್ಲಿ ಊರಿನ ಎಲ್ಲಾ ವಿದ್ಯಾಭಿಮಾನಿ ಬಂಧುಗಳು ಉಪಸ್ಥಿತರಿದ್ದರು.