ಕಕ್ಯಪದವು: ಎಲ್ ಸಿ ಆರ್ ವಿದ್ಯಾಸಂಸ್ಥೆಯಲ್ಲಿ ಡಿ.16ದಂದು ಎಲ್ ಸಿ ಆರ್ ಸಂಭ್ರಮವು ವಿಜೃಂಭನೆಯಿಂದ ನಡೆಯಿತು.
ಡಾ.ಸಂತೋಷ್ ಪ್ರಭು , ಪ್ರೊಫೆಸರ್ ಎಸ್.ಡಿ.ಎಂ ಕಾನೂನು ಕಾಲೇಜು ಮಂಗಳೂರು ಇವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳು ತಪ್ಪು ದಾರಿಯನ್ನು ಹಿಡಿಯದೆ ನೈತಿಕತೆ ಮತ್ತು ಶಿಸ್ತಿಗೆ ಮಹತ್ವ ವನ್ನು ನೀಡಿ ಜಗತ್ತನ್ನು ಗೆಲ್ಲುವುದು ಪ್ರೀತಿಯಿಂದ ಎಂದು ಕರೆ ನೀಡಿದರು.
ಮುಖ್ಯ ಅತಿಥಿ ಶಿವಶಂಕರ್ ಮಾಲಕರು ರೈತಬಂಧು ಆಹಾರೋದ್ಯಮ ಪ್ರೈ ಲಿಮಿಟೆಡ್ , ಮಾರುತಿಪುರ ಬೆಳ್ತಂಗಡಿ, ಇವರು ಮಾತನಾಡಿ ವಿದ್ಯಾರ್ಥಿ ಜೀವನವೆಂಬ ಸುವರ್ಣಾವಕಾಶವನ್ನು ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿಶೇಷ ಮಾನ್ಯತೆಯನ್ನು ನೀಡಿ ತೊಡಗಿಸಿಕೊಳ್ಳುವ ಮೂಲಕ ನಮ್ಮನ್ನು ಸಾರ್ಥಕಗೊಳಿಸಬೇಕು ಎಂದರು.
ವಿಶೇಷ ಆಹ್ವಾನಿತರಾಗಿ ಹಮೀದ್ ಪಿ ಮುಖ್ಯಶಿಕ್ಷಕರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಉಳಿ ಕಕ್ಯಪದವು ಇವರು ಮೌಲ್ಯಾಧಾರಿತ ಶಿಕ್ಷಣದ ಮಹತ್ವವನ್ನು ತಿಳಿಸಿದರು.
ಸಂಸ್ಥೆಯ ಸಂಚಾಲಕರಾದ ಶ್ರೀಮತಿ ಬಬಿತಾ ಆರ್. ನಾಥ್ ಅಧ್ಯಕ್ಷತೆ ವಹಿಸಿದ್ದರು.
ಗೌರವ ಉಪಸ್ಥಿತರಿದ್ದ ಸಂಸ್ಥೆಯ ಕಾರ್ಯದರ್ಶಿ ಶಿವಾನಿ.ಆರ್.ನಾಥ್ ಅಧ್ಯಕ್ಷೀಯ ನೆಲೆಯೊಳಗೆ ಸಂಸ್ಥೆಯ ಸಾಧನೆಯನ್ನು ಶ್ಲಾಘಿಸಿ ಯಶಸ್ಸಿಗೆ ಶ್ರಮಿಸಿದ ಸರ್ವರ ಉಪಕಾರ ಸ್ಮರಣೆ ಮಾಡಿದರು.
ಸಂಸ್ಥೆಯ ಸಂಯೋಜಕರಾದ ಯಶವಂತ್ ಜಿ.ನಾಯಕ್ ಸ್ವಾಗತಿಸಿ, ಪ್ರಾಂಶುಪಾಲರಾದ ಜೋಸ್ಟನ್ ಲೋಬೋ ವಾರ್ಷಿಕ ವರದಿ ವಾಚಿಸಿ, ಉಪನ್ಯಾಸಕಿ ಸೌಮ್ಯ ಎನ್. ಹಾಗೂ ಸಹಶಿಕ್ಷಕಿ ಸಂಗೀತಾ ಅತಿಥಿಗಳ ಪರಿಚಯಿಸಿ ,ಮುಖ್ಯಶಿಕ್ಷಕಿ ಕು| ವಿಜಯಾ.ಕೆ ವಂದಿಸಿ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಮತ್ತು ಸಹಶಿಕ್ಷಕಿ ಸೌಮ್ಯ ಬಿ.ಆರ್ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಹಳೇ ವಿದ್ಯಾರ್ಥಿ ಕಂಬಳ ಕ್ಷೇತ್ರದಲ್ಲಿ ವೇಗದ ಓಟಗಾರನಾಗಿ ಕಿರಿಯ ವಯಸ್ಸಿನಲ್ಲಿ ಹಿರಿಯ ದಾಖಲೆಯನ್ನು ಮಾಡಿದ ಕೃತಿಕ್ ಪೆಂರ್ಗಾಲು ಅವರನ್ನೂ ಗುರುತಿಸಿ ಸನ್ಮಾನಿಸಲಾಯಿತು.
ವಿದ್ಯಾಸಂಸ್ಥೆಯ ಕಳೆದ ಸಾಲಿನ ಶೈಕ್ಷಣಿಕ ಹಾಗೂ ಈ ವರ್ಷದ ಕ್ರೀಡಾ ಸಾಧಕರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕಿ ವಿಂದ್ಯಾಶ್ರೀ ಹಾಗೂ ಸಹಶಿಕ್ಷಕಿ ದಿವ್ಯಾಶ್ರೀ ಸನ್ಮಾನ ಪತ್ರ ವಾಚಿಸಿದರು. ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಶಿಕ್ಷಕರನ್ನೂ ಅಭಿನಂದಿಸಲಾಯಿತು.