ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿಯ 46ನೇ ವರ್ಷದ ಭಜನಾ ಸಪ್ತಾಹ

0

ಮಚ್ಚಿನ: ಶ್ರೀ ಅನಂತೇಶ್ವರ ಸ್ವಾಮಿ ಭಜನಾ ಮಂಡಳಿ ಬಳ್ಳಮಂಜ ಇದರ 46ನೇ ವರ್ಷದ ಭಜನಾ ಸಪ್ತಾಹವು ನ.20ರ ವರೆಗೆ ಭಜನೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಧಾರ್ಮಿಕ ಉಪನ್ಯಾಸಕರಾಗಿ ಬಂಟ್ವಾಳ ತಾಲೂಕು ಜನಜಾಗೃತಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಜೆ ಇವರು ಮಾತನಾಡಿ ಮನೆ ಮನೆಯಲ್ಲಿ ನಿರಂತರವಾಗಿ ಭಜನೆ ನಡೆದರೆ ಆ ಮನೆ ವಿಭಜನೆಯಾಗದು.ಮನೆಯಲ್ಲಿ ಶುಭ ಕಾರ್ಯಗಳು ನಡೆದಾಗ ಭಜನೆಯನ್ನು ಮಾಡಿದರೆ ಶುಭ ಕಾರ್ಯಕ್ಕೆ ದೇವರ ಅನುಗ್ರಹ ಇರುವುದು ಎಂದರು.

ಸರಕಾರಿ ಪ್ರೌಢಶಾಲೆ ಮತ್ತು ವಿದ್ಯಾ ಸಾಗರ್ CBSE ಶಾಲಾ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪುರಸ್ಕರಿಸಲಾಯಿತು ಹಾಗೂ ಎಸ್‍ಎಸ್‍ಎಲ್‍ಸಿ ತಾಲೂಕಲ್ಲಿ ಪ್ರಥಮ ಸ್ಥಾನ ಪಡೆದ ಅಭಿಷೇಕ್ ವಿ ಎಂ. ಮತ್ತು ಮಚ್ಚಿನ ನಿವೃತ್ತ ಅಂಚೆ ವಿತರಕರಾದ ಕೃಷ್ಣಪ್ಪ ಮೂಲ್ಯ ಇವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರರಾದ ಹರ್ಷ ಸಂಪಿಗೆತ್ತಾಯ, ಭಜನಾ ಮಂಡಳಿಯ ಅಧ್ಯಕ್ಷರಾದ ಪುಷ್ಪಕ್ ರಾವ್ ಇವರು ಉಪಸ್ಥಿತರಿದ್ದರು.ಮಂಡಳಿಯ ವಾರ್ಷಿಕ ವರದಿಯನ್ನು ಕಾರ್ಯದರ್ಶಿಗಳಾದ ಯುವರಾಜ್ ಬರಮೇಲು ಮಂಡಿಸಿದರು.ಬಾಲಕೃಷ್ಣ ಬಿ ಸ್ವಾಗತಿಸಿ, ಯತೀಶ್ ರೈ ಅವರು ವಂದಿಸಿದರು.ಹರ್ಷ ಬಳ್ಳಮಂಜ ಕಾರ್ಯಕ್ರಮ ನಿರೂಪಿಸಿದರು.ನಂತರ ಮೊರಾರ್ಜಿ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ ನಡೆಯಿತು.ದೇವರಿಗೆ ಭಜನೆ ಸೇವೆ ರಂಗಪೂಜೆ ದೀಪೋತ್ಸವದೊಂದಿಗೆ 27.11 ರಂದು ಭಜನಾ ಮಂಗಳೋತ್ಸವ ನಡೆಯಿತು.

p>

LEAVE A REPLY

Please enter your comment!
Please enter your name here