ಚಂದ್ರಯಾನ-3 ಯಶಸ್ವಿ: ಧರ್ಮಸ್ಥಳ ಗ್ರಾ.ಪಂ ಗೆ ಇಸ್ರೋದಿಂದ ಅಭಿನಂದನಾ ಪತ್ರ

0

ಧರ್ಮಸ್ಥಳ: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಧರ್ಮಸ್ಥಳ ಗ್ರಾಮ ಪಂಚಾಯತ್‌ನಿಂದ ಇಸ್ರೋ ಸಂಸ್ಥೆಗೆ ಕಳುಹಿಸಿದ್ದ ಅಭಿನಂದನಾ ಪತ್ರಕ್ಕೆ ಇಸ್ರೋ ಸಂಸ್ಥೆಯಿಂದ ಅಭಿನಂದನೆ ಪತ್ರ ನೀಡಿದ್ದಾರೆ.

ಇಸ್ರೋ ಕಳುಹಿಸಿದ ಪತ್ರದಲ್ಲಿ ಏನಿತ್ತು:
ರಾಷ್ಟ್ರಪತಿ ದ್ರೌಪದಿ ಮುರ್ಮು, ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಇಸ್ರೋ ಸಂಸ್ಥೆಯ ಎಲ್ಲಾ ವಿಜ್ಞಾನಿಗಳಿಗೆ ಸಲ್ಲಿಸಿದ ಗೌರವ ಪೂರ್ವಕ ಅಭಿನಂದನೆಗಳಿಗಾಗಿ ಧನ್ಯವಾದಗಳು. ಚಂದ್ರಯಾನ-3 ಯೋಜನೆಯು ರಾಷ್ಟಮಟ್ಟದ ಕಾರ್ಯಕ್ರಮವಾಗಿದ್ದು ಅದರ ಯಶಸ್ವಿಗಾಗಿ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇವೆ.ವಿಜ್ಞಾನವೂ ಸೇರಿದಂತೆ ದೇಶದ ಯಶಸ್ಸನ್ನು ಎಲ್ಲರೊಂದಿಗೆ ಹಂಚಿಕೊಂಡು ಸಂಭ್ರಮಿಸೋಣ.ದೇಶದ ಎಲ್ಲ ಪಂಚಾಯಿತಿಗಳಂತೆ ನಿಮ್ಮಲ್ಲಿಯೂ ಎಲ್ಲಾ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿರುವುದು ನಮ್ಮ ಸಂತಸವನ್ನು ಹೆಚ್ಚಿಸಿದೆ.ಈ ಕಾರ್ಯಕ್ರಮಗಳು ಮುಂದೆಯೂ ಚೆನ್ನಾಗಿ ನಡೆಯಲಿ ಎಂದು ಹಾರೈಸುತ್ತೇವೆ ಎಂದು ಇಸ್ರೋ ಪತ್ರದಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here