ಬೆಳ್ತಂಗಡಿ ಲಯನ್ಸ್ ಕ್ಲಬ್ ನಿಂದ ಸಾಮೂಹಿಕ ದೀಪಾವಳಿ ಆಚರಣೆ- ಸರ್ವಧರ್ಮೀಯರು ಆಚರಿಸುವ ವಿಶ್ವವಿಖ್ಯಾತ ಹಬ್ಬ ದೀಪಾವಳಿ: ಪ್ರಕಾಶ ಶೆಟ್ಟಿ ನೊಚ್ಚ

0

ಬೆಳ್ತಂಗಡಿ: ಅಂತಾರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಕ್ಲಬ್ ದೀಪಾವಳಿ, ಈದ್ ಕ್ರಿಸ್ಮಸ್ ಎಲ್ಲವನ್ನೂ ಆಚರಿಸುತ್ತಾ ಬರುತ್ತಿರುವುದು ಸೌಹಾರ್ದತೆಯ ಮಾದರಿ ಕಾರ್ಯ.ದೀಪಾವಳಿ ಆಚರಣಾ ಕ್ರಮದಲ್ಲಿ ಪ್ರಾದೇಶಿಕವಾಗಿ ಕೆಲವು ವ್ಯತ್ಯಾಸಗಳಿರಬಹುದೇ ಹೊರತು ಸರ್ವಧರ್ಮೀಯರು ಸೇರಿ ಇಡೀ ವಿಶ್ವದಲ್ಲೇ ಆಚರಿಸುವ ವಿಶ್ವ ವಿಖ್ಯಾತ ವಿಶಿಷ್ಟ ಹಬ್ಬ ದೀಪಾವಳಿ ಎಂದು ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ ಹೇಳಿದರು.

ಲಯನ್ಸ್ ಕ್ಲಬ್ ಬೆಳ್ತಂಗಡಿ ವತಿಯಿಂದ ನ.15 ರಂದು ಹಮ್ಮಿಕೊಂಡಿದ್ದ ಸಾಮೂಹಿಕ ದೀಪಾವಳಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಸ್ವಾಗತಿಸಿ ಪ್ರಸ್ತಾವನೆಗೈದರು‌.ಲಯನ್ಸ್ ಕ್ಲಬ್ ಪ್ರಥಮ ಮಹಿಳೆ ಸವಿತಾ ಉಮೇಶ್ ಶೆಟ್ಟಿ ಉದ್ಘಾಟಿಸಿದರು.ನಿಕಟಪೂರ್ವ ಅಧ್ಯಕ್ಷ ಡಾ.ದೇವಿಪ್ರಸಾದ್ ಬೊಳ್ಮ, ಕಾರ್ಯಕ್ರಮ ಸಂಯೋಜಕ ಸುರೇಶ್ ಶೆಟ್ಟಿ ಲಾಯಿಲ ಶುಭ ಕೋರಿದರು.ಕೋಶಾಧಿಕಾರಿ ಶುಭಾಷಿಣಿ ಉಪಸ್ಥಿತರಿದ್ದರು.ಧರಣೇಂದ್ರ ಕೆ ಜೈನ್ ವೇದಿಕೆಗೆ ಆಹ್ವಾನಿಸಿದರು.ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಾರ್ಥನೆ ಹಾಡಿದರು.ಸುಶೀಲಾ ಹೆಗ್ಡೆ ನೀತಿ ಸಂಹಿತೆ ವಾಚಿಸಿದರು.ಧ್ವಜವಂದನೆಯನ್ನು ನಿತ್ಯಾನಂದ ನಾವರ ನಡೆಸಿದರು.ಲಾಂಗೂಲ ಚಾಲಕ ರಾಮಕೃಷ್ಣ ಗೌಡ ನಗೆ ಚಟಾಕಿ ಹಾರಿಸಿದರು. ಕಾರ್ಯದರ್ಶಿ ಅನಂತಕೃಷ್ಣ ವಂದಿಸಿದರು.ಉಪಹಾರದ ಪ್ರಾಯೋಜಕ ದಿನೇಶ್ ಉಜಿರೆ ಅವರನ್ನು ಗೌರವಿಸಲಾಯಿತು.

ದೀಪಾವಳಿ ಪ್ರಯುಕ್ತ ಸಾಮೂಹಿಕ ಹಣತೆ ಪ್ರದರ್ಶನ, ಸುಡುಮದ್ದು ಪ್ರದರ್ಶನ ನಡೆದವು.ಹಾಸ್ಯ ಭರಿತ ಸ್ಪರ್ಧೆ ನಡೆಸಿ ವಿಜೇತರಾದ ಸುಂದರಿ ನಾಣ್ಯಪ್ಪ ದಂಪತಿಯನ್ನು, ಕಿರಿಯರ ವಿಭಾಗದ ರಿದಿ ಶೆಟ್ಟಿ ಅವರನ್ನು ಬಹುಮಾನ ನೀಡಿ ಪುರಸ್ಕರಿಸಲಾಯಿತು.

p>

LEAVE A REPLY

Please enter your comment!
Please enter your name here