ಬೆಳ್ತಂಗಡಿ: ಪೋಲೀಸ್ ಠಾಣೆಯಲ್ಲಿ ದೂರು ನೀಡಿದ ವಿಚಾರ ಮಹಿಳೆ ಜತೆ ಅನುಚಿತ ವರ್ತನೆ,ಅವಾಚ್ಯ ಶಬ್ದಗಳಿಂದ ನಿಂದನೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ ಪ್ರಕರಣ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಗುರುವಾಯನಕೆರೆ ದರ್ಗಾದ ಬಳಿ ಮಹಿಳೆ ಪತಿಯೊಂದಿಗೆ ನ.11 ರಂದು ಸಂಜೆ ವೇಳೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭ ಆರೋಪಿಗಳಾದ ಗೋಳಿಯಂಗಡಿಯ ಆಸೀಪ್ ,ಹಂಝತ್ ಖರ್ರೆ, ನೌಷದ್ ,ಲತೀಫ್ ಎಂಬವರುಗಳು, ದೂರುದಾರರು ಬರುತ್ತಿದ್ದ ಸ್ಕೂಟರನ್ನು ತಡೆದು ನಿಲ್ಲಿಸಿ, ಆರೋಪಿಗಳ ವಿರುದ್ದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ವಿಚಾರವಾಗಿ ತಕರಾರು ತೆಗೆದು, ಮಹಿಳೆಗೆ ಹಾಗೂ ಪತಿಗೆ ಅವಾಚ್ಯ ಶಬ್ದಗಳಿಂದ ಬೈದು, ಜೀವಬೆದರಿಕೆ ಹಾಕಿ, ಹಲ್ಲೆ ನಡೆಸಿರುತ್ತಾರೆ. ಬಳಿಕ ಆರೋಪಿಗಳು ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದಾಗಿ ಎಂಬುದಾಗಿ ನೀಡಿದ ದೂರಿನಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅ ಕ್ರ 112/2023 ಕಲಂ 341,323,354,504,506 r/w 34 ಭಾ ದಂ ಸಂ. ರಂತೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬೆಳ್ತಂಗಡಿ: ಪೊಲೀಸ್ ಠಾಣೆಯಲ್ಲಿ ದೂರು ನೀಡಿದ ವಿಚಾರ. ಮಹಿಳೆ ಜತೆ ಅನುಚಿತ ವರ್ತನೆ, ಹಲ್ಲೆ
p>