ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ನೇತ್ರಾವತಿಯಲ್ಲಿ ಇರುವ ಶ್ರೀ ಕೃಷ್ಣ ಸಸ್ಯಹಾರಿ ಕ್ಯಾಂಟೀನ್ ಕಟ್ಟಡದ ಹಿಂಭಾಗವನ್ನು ಹಿಟಾಚಿ ಯಂತ್ರದ ಮೂಲಕ ಸಂಪೂರ್ಣವಾಗಿ ಕೆಡವಿ ಹಾಕಿರುವ ಕುರಿತು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಪುದು ಮನೆ ಬಾಲಕೃಷ್ಣ ನಾಯರ್ ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.ಎಂದಿನಂತೆ ರಾತ್ರಿ 10 ಗಂಟೆಗೆ ಕ್ಯಾಂಟೀನ್ ಬಂದ್ ಮಾಡಿ ಮನೆಗೆ ಹೋಗಿದ್ದು ಮರುದಿನ ಬೆಳಿಗ್ಗೆ 7:00ಗೆ ಹೋಟೆಲ್ ಗೆ ಬಂದಾಗ ಹೋಟೆಲಿನ ಹಿಂಬದಿ ಸಂಪೂರ್ಣವಾಗಿ ಕೆಡವಿ ಹಾಕಿದ್ದಾರೆ. ಧರ್ಮಸ್ಥಳ ನೇತ್ರಾನಗರದ ಉಮಾನಾಥ್ ಶೆಟ್ಟಿಯ ಮಕ್ಕಳಾದ ಅವಿನಾಶ್ ಶೆಟ್ಟಿ (42), ಅಖಿಲೇಶ್ ಶೆಟ್ಟಿ ಹಾಗೂ ಧರ್ಮಸ್ಥಳ ಗ್ರಾಮದ ನಾರ್ಯ ಮನೆಯ ತುಕುಡ ಗೌಡರ ಮಗ ಸುದರ್ಶನ್ ರವರು ಹಿಟಾಚಿ ಯಂತ್ರದಲ್ಲಿ ಅ. 27ರಂದು ಬೆಳಗ್ಗಿನ ಜಾವ 2ರಿಂದ 3:30ರ ವರೆಗಿನ ಅವಧಿಯಲ್ಲಿ ಕೆಡವಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ಹೋಟೆಲಿನಲ್ಲಿದ್ದ ಫ್ರಿಡ್ಜ್, ಗ್ರೈಂಡರ್, ಮೂರು ಫ್ಯಾನ್, ದೋಸೆ ಕಾವಲಿ ಮತ್ತು 18 ಸಾವಿರ ರೂ ನಗದು ಕಳವು ಮಾಡಿಕೊಂಡು ಹೋಗಿದ್ದು 20 ಲಕ್ಷ ರೂ ನಷ್ಟ ಮಾಡಿರುವುದಾಗಿಯೂ ಆರೋಪಿಸಲಾಗಿದೆ. ಆರೋಪಿಗಳು ಸ್ಥಳಕ್ಕೆ ಬಂದು ಈ ಪ್ರಕರಣದಲ್ಲಿ ಇನ್ನು ಮುಂದೆ ಹೋದಲ್ಲಿ ನಿಮ್ಮನ್ನು ಜೀವ ಸಹಿತ ಬಿಡುವುದಿಲ್ಲ ಎಂಬುದಾಗಿ ಜೀವ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೂವರ ವಿರುದ್ಧ ಕೇಸು ದಾಖಲಾಗಿದೆ
ಧರ್ಮಸ್ಥಳದ ನೇತ್ರಾವತಿ ಶ್ರೀ ಕೃಷ್ಣ ಕ್ಯಾಂಟೀನ್ ಕಟ್ಟಡ ಕೆಡವಿದ ಆರೋಪ- ಮೂವರ ವಿರುದ್ಧ ಕೇಸು ದಾಖಲು.
p>