ಬೆಳ್ತಂಗಡಿ: ಮಲೆಬೆಟ್ಟು ನಿವಾಸಿಯಾಗಿದ್ದು ಪ್ರಸ್ತುತ ದುಬೈಯ ಇಂಡಿಯನ್ ಹೈ ಸ್ಕೂಲ್ ನ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬ್ರಿಯಾನ ಡಿಸೋಜಾ ರವರ ದ ಮಾಸ್ಕ್ವೆರೇಡ್ ಮಿಸ್ಟರಿ ಪುಸ್ತಕವು ಏಷ್ಯನ್ ಲಿಟ್ರೆಸಿ ಸೊಸೈಟಿ ಸಂಸ್ಥೆಯಿಂದ ಕೊಡಲ್ಪಡುವ ಪ್ರತಿಷ್ಠಿತ ಸಾಗರ್ ಮೆಮೋರಿಯಲ್ ಪ್ರಶಸ್ತಿಗೆ ಪಾತ್ರವಾಗಿದೆ.
ಅಕ್ಟೋಬರ್ 28ರಂದು ಡೆಲ್ಲಿಯ ಇಂಡಿಯನ್ ಇಸ್ಲಾಮಿಕ್ ಕಲ್ಚರಲ್ ಸೆಂಟರ್ನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪತ್ರ ಮತ್ತು ಟ್ರೋಫಿಯನ್ನು ಕೊಟ್ಟು ಸನ್ಮಾನಿಸಲಾಯಿತು.
ಬ್ರಿಯಾನ, ಬರಹಗಾರ ಪ್ರಕಾಶ್ ಡಿಸೋಜಾ (ಪ್ರಕಾಶ್ ಮಲೆಬೆಟ್ಟು) ಮತ್ತು ಸುಜಾತಾ ಡಿಸೋಜಾ ಇವರ ಪುತ್ರಿ.
p>