ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ- ಪರಿಸರ ಸಂರಕ್ಷಣೆಗೆ ಬುಡಕಟ್ಟು ಸಮುದಾಯಗಳಿಗೂ ಪರಿಸರ ನೀತಿ ಅಗತ್ಯ-ಡಾ.ಕುರಿಯನ್

0

ಬೆಳ್ತಂಗಡಿ: ಪರಿಸರ ಮಾನವರಿಗೆ ಮಾತ್ರ ಸೇರಿದ್ದಲ್ಲ, ಸಕಲ ಜೀವಿಗಳಿಗೂ ಸೇರಿದ್ದು ಎಂಬ ಅಂಶವನ್ನು ಬುಡಕಟ್ಟು ಸಮುದಾಯಗಳು ಈ ಹಿಂದೆಯೇ ಅರ್ಥೈಸಿಕೊಂಡಿವೆ. ಪರಿಸರ ಸಂರಕ್ಷಣೆಗಾಗಿ, ಪರಿಸದೊಡನೆ ಸಹಜೀವನ ನಡೆಸುವ ಬುಡಕಟ್ಟು ಸಮುದಾಯಗಳೂ ಪರಿಸರ ನೀತಿ ರಚಿಸಿಕೊಂಡು ಆ ಮೂಲಕ ಪರಿಸರ ಸಂರಕ್ಷಣೆ ಮಾಡುವುದರ ಜೊತೆ ಬುಡಕಟ್ಟು ಸಮುದಾಯದ ಸಂಸ್ಕೃತಿ, ಪರಂಪರೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಮೂಡಬಿದ್ರೆ, ಆಳ್ವಾಸ್ ಪದವಿ ಮತ್ತು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಅವರು ಹೇಳಿದರು.

ಅವರು ರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಆಶ್ರಯದಲ್ಲಿ ರಾಜ್ಯ ಮಲೆಕುಡಿಯ ಸಂಘ ಕರ್ನಾಟಕ, ಹಾಗೂ ಮಲೆಕುಡಿಯ ಸಂಘ ದ.ಕ. ಜಿಲ್ಲೆ ಇದರ ಸಹಯೋಗದೊಂದಿಗೆ ಬೆಳ್ತಂಗಡಿ ಕೊಯ್ಯೂರು ಗ್ರಾಮದ ಶಿವಗಿರಿಯಲ್ಲಿರುವ ಮಲೆಕುಡಿಯರ ಸಮುದಾಯ ಭವನದಲ್ಲಿ ನ.05ರಂದು ನಡೆದ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರದಲ್ಲಿ ಹಕ್ಕುಗಳು – ಪ್ರಸ್ತುತ ಸವಾಲುಗಳು ಮತ್ತು ಬುಡಕಟ್ಟು ಸಮುದಾಯದ ಜವಾಬ್ದಾರಿಗಳ ವಿಷಯದ ಕುರಿತಾಗಿ ವಿಶೇಷ ಉಪನ್ಯಾಸ ನೀಡಿದರು.

ಇಂದಿನ ದಿನಗಳಲ್ಲಿ ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಕೆಲವರು ಲಾಬಿ ಮಾಡುತ್ತಿದ್ದಾರೆ. ಆದರೆ ಪರಿಸರವನ್ನೇ ಜೀವಾಳವನ್ನಾಗಿಸಿಕೊಂಡಿರುವ ಬುಡಕಟ್ಟು ಸಮುದಾಯಗಳು ನಿಜವಾಗಿಯೂ ಪರಿಸರ ಸಂಕ್ಷಣೆಯ ಮಾಡುವವರಾಗಿದ್ದಾರೆ ಎಂದರು.

ಮಂಗಳೂರು ವಿ.ವಿ. ಮಂಗಳಗಂಗೋತ್ರಿಯ ಸಮಾಜಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಬಿತಾ ಕೊರಗ ಅವರು ಮಾತನಾಡಿ ?ಬುಡಕಟ್ಟು ಸಮುದಾಯದಲ್ಲಿರುವ ಮೂಢನಂಬಿಕೆಗಳನ್ನು ತೊರೆಯಬೇಕು, ಅಸ್ಪಶ್ಯತೆಯನ್ನು ತೊಡೆದು ಹಾಕಬೇಕು. ಈ ನಿಟ್ಟಿನಲ್ಲಿ ಇಂದಿನ ಜನಾಂಗ ಮಹತ್ವದ ಹೆಜ್ಜೆ ಇರಿಸಬೇಕು ಎಂದರು. ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೆಗ್ಗಡೆದೇವನ ಕೋಟೆಯ ಜೇನುಕುರುಬ ಸಮುದಾಯದ ಸೋಮಣ್ಣ ಅವರ ಸೇವೆ ಹಾಗೂ ಸಾಧನೆಗಳನ್ನು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ರಾಜ್ಯ ಒಕ್ಕೂಟದ ಸಂಯೋಜಕ ಶೈಲೇಂದ್ರ ಕುಮಾರ್ ಮೈಸೂರು ಮಾತನಾಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಬುಡಕಟ್ಟು ಸಮುದಾಯಗಳ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಪರಿಹಾರ ಕ್ರಮಕ್ಕೆ ರಾಜ್ಯ ಒಕ್ಕೂಟವು ಶ್ರಮಿಸಲಿದೆ. ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಭೆ ಒಕ್ಕೂಟವನ್ನು ಮತ್ತಷ್ಟು ಬಲಪಡಿಸುವ ಕಾರ್ಯವನ್ನೂ ಮಾಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಹೆಗ್ಗಡೆದೇವನ ಕೋಟೆಯ ಜೇನುಕುರುಬ ಸಮುದಾಯದ ಶೀ ಸೋಮಣ್ಣ ಅವರನ್ನು ಅಭಿನಂದಿಸಿ, ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ಪೆರ್ನಾಲು-ಕಾಪುವಿನ ಸಮಗ್ರ ಗ್ರಾಮೀಣ ಆಶ್ರಮದ ಅಶೋಕ್ ಕುಮಾರ್ ಶೆಟ್ಟಿ, ಕರ್ನಾಟಕ-ಕೇರಳ ಕೊರಗ ಅಭಿವೃದ್ಧಿ ಸಂಘಗಳ ರಾಜ್ಯ ಸಂಚಾಲಕಿ ಸುಶೀಲಾ ನಾಡ, ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ಒಕ್ಕೂಟದ ರಾಜ್ಯ ಸಂಚಾಲಕಿ ಪುಷ್ಪ ಬೆಟ್ಟ ಕುರುಬ, ದ. ಕ. ಜಿಲ್ಲಾ ಸಂಚಾಲಕ ಸಂಜೀವ ಮೂಡಬಿದ್ರೆ, ಶಿವಮೊಗ್ಗ ಜಿಲ್ಲಾ ಸಂಚಾಲಕಿ ಲಕ್ಷ್ಮಮ್ಮ, ಉಳ್ಳಾಲ ಸೋಮೇಶ್ವರ ಪುರಸಭೆಯ ಮುಖ್ಯಾಧಿಕಾರಿ ಮತ್ತಾಡಿ ಕಾಯರ್‌ಪಲ್ಕೆ, ಕೊರಗ ನ್ಯಾಯಕೂಟದ ಅಧ್ಯಕ್ಷ ಬಾಲರಾಜ್ ಮಂಗಳೂರು, ಪಂಜಾಬ್ ನ್ಯಾಶನಲ್ ಬ್ಯಾಂಕ್‌ನ ನಿವೃತ್ತ ಪ್ರಬಂಧಕ ಕರಿಯ ಕುಡಿಯ, ಮಲೆಕುಡಿಯರ ಸಂಘ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷ ಹರೀಶ್ ಎಳನೀರು, ನಿಕಟಪೂರ್ವ ಅಧ್ಯಕ್ಷ ಶ್ರೀನಿವಾಸ್ ಉಜಿರೆ, ತಾಲೂಕು ಅಧ್ಯಕ್ಷ ಶಿವರಾಮ್ ಉಜಿರೆ, ಕೃಷ್ಣ ಪೂರ್ಜೆ, ಉಮಾನಾಥ್ ಧರ್ಮಸ್ಥಳ, ಸೇಸಪ್ಪ ಕೊಯ್ಯೂರು, ಉಪಸ್ಥಿತರಿದ್ದರು.
ಕೃಪಾ ಕೆ. ಧರ್ಮಸ್ಥಳ ಪ್ರಾರ್ಥಿಸಿದರು. ಗೀತಾ ಬಾಲಕೃಷ್ಣ ಸನ್ಮಾನ ಪತ್ರ ವಾಚಿಸಿದರು. ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟ ದ. ಕ. ಜಿಲ್ಲಾ ಸಂಚಾಲಕ ಬಾಲಕೃಷ್ಣ ಕೆ. ಪೊಳಲಿ ಸ್ವಾಗತಿಸಿ, ಮಲೆಕುಡಿಯರ ಸಂಘ.ದ.ಕ. ಜಿಲ್ಲಾ ಸಮಿತಿಯ ಪ್ರ,. ಕಾರ್ಯದರ್ಶಿ ಜಯೇಂದ್ರ ಎಂ. ನಿಡ್ಲೆ ಧನ್ಯವಾದ ಸಲ್ಲಿಸಿದರು. ರೇಷ್ಮಾ ಬೆಳಾಲು ಕಾರ್ಯಕ್ರಮ ನಿರೂಪಿಸಿದರು.

p>

LEAVE A REPLY

Please enter your comment!
Please enter your name here