ಬೆಳ್ತಂಗಡಿ: ಕಾರ್ಕಳದಲ್ಲಿ ನಡೆದ ಧರ್ಮ ಸಂರಕ್ಷಣಾ ಸಭೆಯಲ್ಲಿ, ಸ್ವಾಮೀಜಿಗಳು ಮತ್ತು ಗಣ್ಯ ವ್ಯಕ್ತಿಗಳ ಉಪಸ್ಥಿತಿಯಲ್ಲಿ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ ವಿರುದ್ಧ ವಿನಾ ಕಾರಣ ಮಾನ ಹಾನಿ ಮತ್ತು ವೈಯಕ್ತಿಕ ತೇಜೋವದೆ ಮಾಡಿ ಮಾತಾಡಿದ ಹಾಗೂ ಜೀವ ಬೆದರಿಕೆ ಒಡ್ಡಿದ ಪವರ್ ಟಿ.ವಿ ಯ ವ್ಯವಸ್ಥಾಪಕ ರಾಕೇಶ್ ಶೆಟ್ಟಿ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು.
ಈ ಸಂದರ್ಭದಲ್ಲಿ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜರಾಮ ಕೆ.ಬಿ., ಉಪ್ಪಿನಂಗಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಪುತ್ತೂರು ತಾಲೂಕು ಬಿಲ್ಲವ ಸಂಘದ ಮಾಜಿ ಅಧ್ಯಕ್ಷ ವರದರಾಜ ಎಂ., ಪ್ರಮುಖರಾದ ಅಶ್ರಫ್ ಬಸ್ತಿಕಾರ್, ಕೃಷ್ಣರಾವ್ ಅರ್ತಿಲ, ಮಾಯಿಲತ್ತೋಡಿ ಈಶ್ವರ ಭಟ್, ಜಯವಿಕ್ರಮ್ ಕಲ್ಲಾಪು, ಜಿನ್ನಪ್ಪ ಪೂಜಾರಿ ಆಟಾಲು, ನಝೀರ್ ಮಠ ಮತ್ತಿತರರು ಉಪಸ್ಥಿತರಿದ್ದರು.
p>