ನೆಲ್ಯಾಡಿ: ವಿವಿಧ ಬಗೆಯ ಸಮಾಜ ಸೇವಾ ಕಾರ್ಯಕ್ರಮಗಳ ಮೂಲಕ ಬಡತನ ನಿರ್ಮೂಲನೇ, ಮತ್ತು ಸಾಂತ್ವನ ಕಾರ್ಯಗಳನ್ನು ಅನುಷ್ಠಾನಗೊಳಿಸಿ ದೀನ ಸೇವಾ ಕಾರ್ಯದಲ್ಲಿ ಅಪೂರ್ವ ವಾದ ಕೊಡುಗೆಗಳು ಸಮಾಜಕ್ಕೆ ನೀಡುತ್ತಿರುವ, ವಿನ್ಸೆಂಟ್ ಡಿ ಪೌಲ್ ಸೊಸೈಟಿ ಯ ಕುಟ್ರಪ್ಪಾಡಿ, ಉದನೆ ವಲಯಗಳ ಏರಿಯಾ ಕೌನ್ಸಿಲ್ ನ ಚಿಂತನ ಮಂತನ ಕಾರ್ಯಕ್ರಮವು ಆ.22 ರಂದು ನೆಲ್ಯಾಡಿ ಅಲ್ಫೋನ್ಸ ಚರ್ಚ್ ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ದ ಧರ್ಮಗುರುಗಳು, ಕೆ.ಎಸ್.ಎಂ.ಸಿ.ಎ ನಿರ್ದೇಶಕರು ಆದ ವಂದನಿಯ ಶಾಜಿ ಮಾತ್ಯು ವಿನ್ಸೆಂಟ್ ಡಿ ಪೌಲ್ ಸಂಸ್ಥೆ ಕೈಗೆತ್ತಿರುವ ಕಾರ್ಯಗಳು ನೆರವಾಗಿ ಜನ ಸಾಮಾನ್ಯರಿಗೆ ಶುಭಸಂದೇಶವನ್ನು ನೀಡುವ ಕಾರ್ಯಗಳಾಗಿವೆ ಎಂದು ತಿಳಿಸಿದರು.
ವೇದ ಗ್ರಂಥ ಗಳ ಪಾರಾಯಣವಲ್ಲ ಪಾಲನೆ ಮತ್ತು ಅನುಷ್ಠಾನ ಮುಖ್ಯ ಎಂದು ಈ ಸಂದರ್ಭದಲ್ಲಿ ಕರೆ ನೀಡಿದರು. ವಿವಿದ ಸಮಿತಿ ಗಳ ಕಾರ್ಯ ಚಟುವಟಿಕೆ ಗಳ ಬಗ್ಗೆ ಚರ್ಚಿಸಲಾಯಿತು.ಮಂಡಿಸಲಾಯಿತು.
ಮುಂದಿನ ವಿವಿಧ ಯೋಜನೆಗಳ ವಿಸ್ತ್ರತ ವರದಿ ಮಂಡಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಏರಿಯಾ ಕೌನ್ಸಿಲ್ ಅಧ್ಯಕ್ಷರಾದ ಮಾತ್ಯು ಅರಕ್ಕತರ ವಹಿಸಿದ್ದರು.ಕೇಂದ್ರ ಸಮಿತಿಯ ಬಿನೋಯ್ ಮೇವಡ ಕಾರ್ಯದರ್ಶಿ ಬಾಬುರಾಜ್ ಆರ್ಲ, ಸಣ್ಣಿಒಟ್ಟ ಪ್ಲಾಕಲ್ ನೆಲ್ಯಾಡಿ ಸಿಸ್ಟೆರ್ ತೆರೆಸ್ ಕುರಿಯನ್ ಮೊದಲಾವರು ಉಪಸ್ಥಿತರಿದ್ದರು.