ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಮಹಿಳಾ ಆರೋಗ್ಯ ನಿರ್ವಹಣೆಯಲ್ಲಿ ಪೌಷ್ಟಿಕ ಆಹಾರದ ಪಾತ್ರ ಉಪನ್ಯಾಸ ಕಾರ್ಯಕ್ರಮ- ಆರೋಗ್ಯಕರ ಜೀವನಕ್ಕೆ ಸಿರಿಧಾನ್ಯವೇ ಮದ್ದು: ಡಾ.ಗೀತಾ ಬಿ.ಶೆಟ್ಟಿ

0

ಉಜಿರೆ: ಸಿರಿಧಾನ್ಯ ಪದಾರ್ಥಗಳು ಆರೋಗ್ಯ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಸುತ್ತವೆ. ಭಷ್ಯದಲ್ಲೂ ಆರೋಗ್ಯವನ್ನು ಸುಸ್ಥಿರವಾಗಿಸಿಕೊಳ್ಳಲು ನೆರವಾಗುತ್ತವೆ ಎಂದು ಎಸ್.ಡಿ.ಎಂ. ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಜ್ಞಾನ ಮಹಾದ್ಯಾಲಯದ ಡೀನ್ ಡಾ. ಗೀತಾ ಬಿ.ಶೆಟ್ಟಿ ಹೇಳಿದರು.ಉಜಿರೆ ಎಸ್.ಡಿ.ಎಂ. ಕಾಲೇಜಿನ ಸ್ಟೂಡೆಂಟ್ ವೆಲ್ಫೇರ್ ವುಮೆನ್ ಡೆವಲಪ್‌ಮೆಂಟ್ ಘಟವು ಆಯೋಜಿಸಿದ್ದ ಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಮಳಾ ಆರೋಗ್ಯ ನಿರ್ವಹಣೆಯಲ್ಲಿ ಪ್ಟೌಕ ಆಹಾರದ ಪಾತ್ರ’ ಕುರಿತು ಮಾತನಾಡಿದರು.

ನಾವು ಆರೋಗ್ಯವಾಗಿರಲು ನಮಗೆ ಹಲವಾರು ಅಂಶಗಳು ಮುಖ್ಯವಾಗುತ್ತವೆ.ಅವುಗಳಲ್ಲಿ ನೀರು, ನಿದ್ದೆ, ಸರಿಯಾದ ಪ್ರಮಾಣದ ಆಹಾರ ಪ್ರಮುಖವಾಗಿವೆ. ಇಂದಿನ ದಿನಗಳಲ್ಲಿ ಆಹಾರ ಎಂದರೆ ಕೇವಲ ಸೀತ ಆಹಾರ ಪದಾರ್ಥಗಳಾಗಿವೆ. ಆದರೆ ಅವುಗಳನ್ನು ಹೊರತುಪಡಿಸಿಯೂ ಹಲವಾರು ಪ್ಟೌಕಾಂಶಯುಕ್ತ ಧಾನ್ಯಗಳನ್ನು ನಾವು ದಿನದಲ್ಲಿ ಸೇಸುವುದರಿಂದ ದೇಹದ ಆರೋಗ್ಯವನ್ನು ವೃದ್ಧಿಪಡಿಸಬಹುದು. ದಿನದಲ್ಲಿ ನಾವು ಹೆಚ್ಚು ಸಿರಿಧಾನ್ಯಗಳನ್ನು ಸೇಸಿದಾಗ ಅದು ಹಲವಾರು ರೋಗಗಳಿಂದ ನಮ್ಮನ್ನು ದೂರಡುತ್ತದೆ ಎಂದರು.

ಸಿರಿಧಾನ್ಯಗಳ ಜೊತೆಗೆ ಸಾಕಷ್ಟು ಪ್ರಮಾಣದ ನೀರನ್ನು ಸೇಸಿದಾಗ ಅದು ದೀನಡಿ ನಮ್ಮ ಶಕ್ತಿ ಕಾಪಾಡಲು ಸಹಾಯಕ ಆಗುತ್ತದೆ. ದಿನದಲ್ಲಿ 2 ರಿಂದ 3 ಲೀಟರ್‌ನಷ್ಟು ನೀರನ್ನು ಸೇಸಿದಾಗ ನಮ್ಮ ಆರೋಗ್ಯದ ಜೊತೆಗೆ ತ್ವಚೆಯ ಕಾಂತಿಯನ್ನು ವೃದ್ಧಿ ಮಾಡುತ್ತದೆ.ಸರಿಯಾದ ಪ್ರಮಾಣದ ನೀರಿನ ಸೇವನೆ ಆಗದಿದ್ದಲ್ಲಿ ಅದು ದೇಹದ ನಿರ್ಜಲೀಕರಣಕ್ಕೆ ಕಾರಣವಾಗುತ್ತದೆ.ಅದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದರು.

ಇವೆರಡರ ಜೊತೆಗೆ ನಿದ್ದೆ ನಮ್ಮ ದೈಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡುತ್ತದೆ. ನಿದ್ದೆಯು ಸರಿಯಾದ ಹೊತ್ತಿನಲ್ಲಿ ಆಗದಿದ್ದರೆ ಮಾನಸಿಕ ಒತ್ತಡ ಹೆಚ್ಚಾಗಲು ಅದು ಪೂರಕವಾದ ಕಾರಣವಾಗಿತ್ತದೆ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಲೂ ನಿದ್ದೆ ಹಾಗೂ ಧ್ಯಾನವೇ ಸರಿಯಾದ ಪರಿಹಾರ. ಒಂದು ವ್ಯಕ್ತಿಗೆ ದಿನದಲ್ಲಿ ೮ ತಾಸಿನ ನಿದ್ದೆ ಬಹಳ ಮುಖ್ಯವಾಗುತ್ತದೆ. ಅಷ್ಟು ಸಮಯ ಆತ ನಿದ್ದೆಗೆಂದು ಸಲಿಡದಿದ್ದರೆ ದೈಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಹದಗೆಡುತ್ತದೆ ಎಂದು ವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ.ಬಿ. ಎ.ಕುಮಾರ್ ಹೆಗ್ಡೆ ಅವರು ಮಾತನಾಡಿದರು. ಆಹಾರ, ಹಾರ, ಆಚಾರ, ಚಾರ ಇವುಗಳು ಸರಿಯಾಗಿದ್ದರೆ ಯಾವುದೇ ರೀತಿಯ ಸಮಸ್ಯೆಗಳು ಎದುರಾಗುವುದಿಲ್ಲ. ಕೇವಲ ಆಹಾರವನ್ನು ಸೇಸಿದರೆ ಅದು ಆರೋಗ್ಯ ನೀಡುವುದಿಲ್ಲ.ಅದರ ಬದಲು ದೇಹಕ್ಕೆ ಶ್ರಮ ನೀಡಬೇಕು. ಆಗ ಮಾತ್ರ ನಾವು ಆರೋಗ್ಯವಂತರಾಗಿರಲು ಸಾಧ್ಯ ಎಂದರು.ಕಾರ್ಯಕ್ರಮದಲ್ಲಿ ಸಂಯೋಜಕ ನಟರಾಜ್ ಹೆಚ್.ಕೆ ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸಂಯೋಜಕಿ ಅಕ್ಷತಾ ಜೈನ್ ಸ್ವಾಗತಿಸಿದರು. ರಕ್ಷಿತಾ ದಾಸ್ ನಿರೂಪಿಸಿದರೆ, ಸ್ನೇಹ ರಜಪೂತ್ ವಂದಿಸಿದರು.

p>

LEAVE A REPLY

Please enter your comment!
Please enter your name here