ಗಂಡಿಬಾಗಿಲು: ಇಲ್ಲಿಯ ನೆರಿಕ್ಕಾಡ್ ತೆರುವನ್ ಕುನ್ನೇಲ್ ಮನೆಯ ತಂಗಚ್ಚನ್ ಟಿ. ಎ. (64ವ) ರವರು ಅಲ್ಪಕಾಲದ ಅಸ್ವಾಸ್ತ್ಯದಿಂದ ಅ.10 ರಂದು ಬೆಳ್ತಂಗಡಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಗಂಡಿಬಾಗಿಲು ಪರಿಸರದಲ್ಲಿ ಜನಾನುರಾಗಿಯಾಗಿದ್ದ ಇವರು ಸರಳ ಜೀವಿಯಾಗಿದ್ದು ಪತ್ನಿ, ಪುತ್ರ, ಸೊಸೆ, ಪುತ್ರಿಯರನ್ನು ಅಗಲಿದ್ದಾರೆ.ಮೃತರ ಮನೆಗೆ ಉಜಿರೆ ಸಂತ ಅಂತೋನಿ ಧರ್ಮ ಕೇಂದ್ರದ ಪ್ರಧಾನ ಗುರುಗಳಾದ ರೆ.ಫಾ.ಜೇಮ್ಸ್ ಡಿಸೋಜ, ಅನುಗ್ರಹ ಪಿ.ಯು ಕಾಲೇಜಿನ ಪ್ರಾಂಶುಪಾಲರಾದ ರೆ.ಫಾ.ವಿಜಯ್ ಲೋಬೊ ರವರು ಭೇಟಿ ನೀಡಿ ಮೃತರ ಆತ್ಮಕ್ಕೆ ಶಾಂತಿಗಾಗಿ ಪ್ರಾರ್ಥನೆ ಮಾಡಿದರು ಮತ್ತು ದುಃಖ ತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಕೋರಿದರು.
p>