ಬೆಳಾಲು : ಇಲ್ಲಿಯ ಅನಂತೋಡಿ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸೆ.28 ರಂದು ಶ್ರೀ ಅನಂತಪದ್ಮನಾಭ ದೇವಸ್ಥಾನದ ಆನುವಂಶಿಕ ಮೊತ್ತೇಸರ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಹಾಗೂ ದೇವಸ್ಥಾನದ ಗೌರವ ಮಾರ್ಗದರ್ಶಕ ಯು.ಶರತ್ ಕೃಷ್ಣ ಪಡೆಟ್ನಾಯರ ಮಾರ್ಗದರ್ಶನದಲ್ಲಿ ಅನಂತ ಚತುರ್ದಶಿ ಪೂಜೆ (ನೋಂಪು), ತೆನೆ ಹಬ್ಬ, ರಾತ್ರಿ ರಂಗ ಪೂಜೆ ಜರಗಿತು.
ದೇವಸ್ಥಾನದ ಆಡಳಿತ ಮೊಕ್ತೆಸರ ಜೀವಂದರ ಕುಮಾರ್ ಜೈನ್ ಬೆಳಾಲು ಗುತ್ತು, ಆಶ್ರಣ್ಣ ಗಿರೀಶ್ ಬಾರಿತ್ತಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನೋಟರಿ ವಕೀಲ ಶ್ರೀನಿವಾಸ ಗೌಡ,ಪ್ರಧಾನ ಕಾರ್ಯದರ್ಶಿ ದುರ್ಗಾಪ್ರಸಾದ್ ಕೆರ್ಮುಣ್ಣಾಯ,ಸಮಿತಿಯ ಸದಸ್ಯರು,ಪ್ರಧಾನ ಅರ್ಚಕ ಅನಂತರಾಮ ಶಬರಾಯ ಮತ್ತು ಬಳಗ ಹದಿನಾಲ್ಕು ಬೈಲುವಾರು ಸಮಿತಿಯ ಪ್ರಧಾನ ಸಂಚಾಲಕರು ಹಾಗೂ ಸಂಚಾಲಕರು, ಅನಂತಪದ್ಮನಾದ ಮಹಿಳಾ ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ವಿಲಯದವರು, ಶ್ರೀ ಅನಂತೆಶ್ವರ ಭಜನಾ ಮಂಡಳಿ, ಶ್ರೀ ಅನಂತಪದ್ಮನಾಭ ಮಹಿಳಾ ಭಜನಾ ತಂಡದ ಅಧ್ಯಕ್ಷರು, ಪದಾಧಿಕಾರಿಗಳು, ಭಕ್ತರು ಹಾಜರಿದ್ದು ಸಹಕರಿಸಿದರು.ಊರ ಪರ ಊರ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಕಾರ್ಯಕ್ರಮದ ಅಂಗವಾಗಿ ದೇವರಿಗೆ ಶ್ರೀ ದೇವರಿಗೆ ಪಂಚಾಮೃತ ಅಭಿಷೇಕ, ಪವಮಾನ ಕಲಶಾಭಿಷೇಕ,ಬಳಿಕ ತೆನೆ ತಂದು ಪೂಜೆ, ಬಲಿವಾಡು ಸೇವೆ, ಭಜನೆ,ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ರಾತ್ರಿ ಶ್ರೀ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆಯ ಬಳಿಕ “ಕಲಾಮಯಂ” ಉಡುಪಿ ಇವರಿಂದ ಜನಪದ ಸಂಗೀತ ಮತ್ತು ಜಾನಪದ ವಾದ್ಯ ಪರಿಕರಗಳ ಸಮ್ಮಿಲನ ಜರಗಿತು.