ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮ

0

ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ)ಬೆಳ್ತಂಗಡಿ, ನವಜೀವನ ಆರೈಕೆ ಮತ್ತು ಬೆಂಬಲ ಕೇಂದ್ರ ನೇತೃತ್ವದಲ್ಲಿ ಸೆ.23ರಂದು ಹೆಚ್.ಐ.ವಿ ಸೋಂಕಿತ ವ್ಯಕ್ತಿಗಳ ಮಾಸಿಕ ಬೆಂಬಲ ಸಭೆ ಹಾಗೂ ಮಾಹಿತಿ ಕಾರ್ಯಕ್ರಮವನ್ನು ಸಾಂತೋಮ್ ಟವರ್ ಬೆಳ್ತಂಗಡಿ ಇಲ್ಲಿ ಆಯೋಜಿಸಲಾಗಿತ್ತು.

ಅತಿಥಿಗಳಾಗಿ ರೋಟರಿ ಕ್ಲಬ್ ಬೆಳ್ತಂಗಡಿ ಇದರ ಅಧ್ಯಕ್ಷರಾದ ಅನಂತ್ ಭಟ್ ಇವರು ಪೌಷ್ಟಿಕ ಆಹಾರ ವಿತರಿಸಿ ಮನುಷತ್ವದ ನೆಲೆಯಲ್ಲಿ ಸಂಸ್ಥೆಯ ಮೂಲಕ ನಡೆಸುವ ಕಾರ್ಯ ಕ್ರಮಕ್ಕೆ ಅಭಿನಂದನೆ ಸಲ್ಲಿಸಿ ಮುಂದಿನ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವನ್ನು ನೀಡುವುದಾಗಿ ತಿಳಿಸಿದರು.ಪುಷ್ಪ , ಪ್ರೇಮಾ ಮತ್ತು ಶಶಿಕಲಾ ಇವರು ಹಾಡಿನ ಮೂಲಕ ಎಲ್ಲರನ್ನು ಮನೋರಂಜಿಸಿದರು.ಕುಮಾರಿ ಆಫ್ರೀನ ಇವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಡಿ.ಕೆ.ಆರ್. ಡಿ.ಎಸ್ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಬಿನೋಯಿ ಎ.ಜೆ ಇವರು ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮವು ಬೆಳೆದು ಬಂದ ಹಾದಿಯ ವಿವರಣೆ ನೀಡಿದರು.ಮಂಗಳೂರಿನ ಡಾಕ್ಟರ್ ಪಿ ದಯಾನಂದ ಪೈ- ಪಿ.ಸತೀಶ್ ಪೈ ಕಾಲೇಜಿನ ಎಂ.ಎಸ್.ಡಬ್ಲ್ಯೂ ವಿಧ್ಯಾರ್ಥಿಗಳಾದ ಕುಮಾರಿ ನಿವೇದಿತಾ, ಕುಮಾರಿ ಪಾವನ ಮತ್ತು ಕುಮಾರಿ ದಾಕ್ಷ್ಯಯಣಿ ರವರು ವಿವಿಧ ಚಟುವಿಕೆಗಳ ಮೂಲಕ ಪ್ರೇರಣಾ ತರಬೇತಿಯನ್ನು ನೆರವೇರಿಸದರು.

ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕುಮಾರಿ ನಿವೇದಿತಾರವರು ಎಲ್ಲರನ್ನು ಸ್ವಾಗತಿಸಿ, ಕುಮಾರಿ ಪಾವನ ಇವರು ವಂದಿಸಿದರು.ಕಾರ್ಯಕ್ರಮದ ಸಂಯೋಜಕಿ ಕುಮಾರಿ ಶ್ರೇಯಾರವರು ನಿರೂಪಿಸಿದರು.
ರಾಷ್ಟ್ರಗೀತೆಯೊಂದಿಗೆ ಕೊನೆಗೊಳಿಸಲಾಯಿತು.

p>

LEAVE A REPLY

Please enter your comment!
Please enter your name here