ಮುಂಡೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವ

0

ಮುಂಡೂರು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮುಂಡೂರು ಇಲ್ಲಿ ಜರುಗಿದ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮುಂಡೂರು ಇದರ 9ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಕಾರ್ಯಕ್ರಮದ ಧಾರ್ಮಿಕ ಮತ್ತು ಭಜನಾ ಕಾರ್ಯಕ್ರಮವನ್ನು ಬೆಂಗಳೂರಿನ ಉದ್ಯಮಿ ದಿವಾಕರ ಮೂಲ್ಯ ರವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಮುಂಡೂರು ಸರಕಾರಿ ಕಿ.ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಕಲ್ಲೇಶಪ್ಪರನ್ನು ಹಾಗೂ ಮುಂಡೂರು ಗ್ರಾಮದ ಪ್ರಥಮ ಪ್ರಜೆ ಸವಿತಾರವರು ಮೇಲಂತಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆ ಯಾಗಿರುವುದನ್ನು ಗುರುತಿಸಿ ಸನ್ಮಾನಿಸಿ ಗೌರವಿಸಲಾಯಿತು.

ಗಣೇಶೋತ್ಸವ ಸಮಿತಿಯ ಮಾಜಿ ಅಧ್ಯಕ್ಷ ಯೋಗೀಶ್ ಕುಮಾರ್ ಕೆ.ಎಸ್., ಅಧ್ಯಕ್ಷ ಅಶೋಕ್ ಕುಮಾರ್ ಕೊಡಕ್ಕಲ್, ಉಪಾಧ್ಯಕ್ಷ ರಮೇಶ್ ದೇವಾಡಿಗ, ಕಾರ್ಯದರ್ಶಿ ಪ್ರಸನ್ನ ನಾನಿಳ್ತ್ಯಾರ್, ಕೋಶಾಧಿಕಾರಿ ಹರಿಶ್ಚಂದ್ರ ಹೆಗ್ಡೆ, ಪ್ರಧಾನ ಅರ್ಚಕ ಅರವಿಂದ ಭಟ್, ರಾಘವೇಂದ್ರ ಭಟ್, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಡಾ.ಎಂ.ಎಂ.ದಯಾಕರ ಭಟ್, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಸಂತೋಷ್ ಕುಮಾರ್, ಅಭಿವೃದ್ಧಿ ಸಮಿತಿಯ ಅಧ್ಯಕ್ಷ ರಾಜೀವ್ ಸಾಲಿಯಾನ್, ಶ್ರೀ ಶಾರದಾಂಭ ಯುವಕ ಮಂಡಲ ಅಧ್ಯಕ್ಷ ರಮಾನಂದ ಸಾಲಿಯಾನ್, ಭಜನಾ ಮಂಡಳಿಯ ಅಧ್ಯಕ್ಷ ಶ್ರೀಧರ್ ಅಂಚನ್, ಕಾರ್ಯದರ್ಶಿ ಕೇಶವ್ ಕುಲಾಲ್, ವರಮಹಾಲಕ್ಷ್ಮಿ ಪೂಜಾ ಸಮಿತಿಯ ಅಧ್ಯಕ್ಷೆ ಉಮಾವತಿ, ಆನಂದ ಸಾಲಿಯಾನ್, ಚಾಮರಾಜ ಸೇಮಿತ, ವಸಂತ ಪೂಜಾರಿ, ಜಯಾನಂದ ಬಂಗೇರ, ಸದಾನಂದ ನಾಯ್ಕ್, ಸುರೇಶ್ ಶೆಟ್ಟಿ ಇವರುಗಳು ಸೇರಿ ಗೌರವಾನ್ವಿತರನ್ನು ಸನ್ಮಾನಿಸಿದರು.ತದ ನಂತರ ಶ್ರೀ ಶಾರದಾ ಭಜನಾ ಮಂಡಳಿ ಸದಸ್ಯರಿಂದ ಹಾಗೂ ಶ್ರೀ ಗುರು ಮಿತ್ರ ಸಮೂಹ ಬೆಳ್ತಂಗಡಿಯ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು.

ವೈದಿಕ ವಿಧಿ ವಿಧಾನಗಳು ನಡೆದು ಗಣೇಶನ ವಿಗ್ರಹವನ್ನು ದೇವಸ್ಥಾನದ ಕೆರೆಯಲ್ಲಿ ಜಲ ಸ್ತಂಭನ ಮಾಡಲಾಯಿತು..

LEAVE A REPLY

Please enter your comment!
Please enter your name here