ಗೇರುಕಟ್ಟೆ : ಕಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಟಿತ 2022-23 ನೇ ಸಾಲಿನಲ್ಲಿ ವಾರ್ಷಿಕ ಮಹಾಸಭೆ ಸೆ.3 ಸಹಕಾರಿ ಭವನದಲ್ಲಿ ಜರುಗಿತು.
ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ ಪ್ರಸ್ತುತ ಸಾಲಿನಲ್ಲಿ ಸಹಕಾರಿ ಸಂಘವು 252 ಕೋಟಿ ವ್ಯವಹಾರ ನಡೆಸಿದೆ.ಸುಮಾರು 76.10 ಲಕ್ಷ ರೂಪಾಯಿ ನಿವ್ವಳ ಲಾಭ ಗಳಿಸುವ ಮೂಲಕ ಸಂಘದ ಸದಸ್ಯರಿಗೆ ಶೇಕಡಾ 16% ಡಿವಿಡೆಂಡ್ ನೀಡುವುದಾಗಿ ಸಭೆಯಲ್ಲಿ ಘೋಷಿಸಿದರು.ಹಾಗೂ ನಮ್ಮ ಸಂಘದ ಕಾರ್ಯ ವ್ಯಾಪ್ತಿಯು ಕಳಿಯ,ನ್ಯಾಯತರ್ಪು ಮತ್ತು ಓಡಿಲ್ನಾಳ ಗ್ರಾಮಗಳಿಗೆ ಸೀಮಿತವಾಗಿದೆ. ಕೃಷಿ ಅಭಿವೃದ್ಧಿ ಕೆಲಸಗಳಿಗೆ, ಕೃಷಿಉತ್ಪಾದನೆ, ಹೈನುಗಾರಿಕೆ ಹಾಗೂ ಕೃಷಿಯೇತರ ಚಟುವಟಿಕೆಗಳನ್ನು ಹೆಚ್ಚಿಸಲು ಸಂಬಂಧಿಸಿದ ಇಲಾಖೆಯ ಕೃಷಿ ತಜ್ಞರಿ ಮಾಹಿತಿ ,ಸಲಹೆಗಳನ್ನು ನೀಡವ ಕೆಲಸ ನಿರಂತರವಾಗಿ ನಡೆಯುತ್ತಲೇ ಬಂದಿದೆ.ಮುಂದಿನ ದಿನಗಳಲ್ಲೂ ಕೃಷಿಕರೊಂದಿಗೆ ಕೈಜೋಡಿಸುವುದಾಗಿ ತಿಳಿಸಿದರು.
ಸಂಘದ ಸಂಘದ ಸದಸ್ಯರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಮೂಲಕ ಪ್ರಸ್ತುತ ಸಾಲಿನ 10 ನೇ ತರಗತಿಯಲ್ಲಿ 500 ಕ್ಕೆ ಮೇಲ್ಪಟ್ಟ 23 ಮಕ್ಕಳಿಗೆ ಹಾಗೂ ಪಿಯುಸಿ ವಿಭಾಗದ 22 ಮಕ್ಕಳಿಗೆ ನದದು ಹಣ ನೀಡಿ ವೇದಿಕೆಯಲ್ಲಿ ಗೌರವಿಸಿದರು.ಹಾಗೂ ಕೃಷಿ ಪತ್ತಿನ ಸಂಘ ಮಳಿಗೆಯಿಂದ ಅತಿ ಹೆಚ್ಚು ಕೃಷಿ ಉಪಕರಣಗಳನ್ನು ಖರೀದಿಸಿದ ತಲಾ 3 ಗ್ರಾಮದ 6 ಸದಸ್ಯರಿಗೆ ಕೃಷಿ ಉತ್ಪನ್ನಗಳನ್ನು ನೀಡಿದರು.
ಸಂಘದ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸತ್ಯ ಶಂಕರ್ ಭಟ್ ಕೆ.ಜಿ. ವಾರ್ಷಿಕ ವರದಿಯನ್ನು ಸಭೆಯಲ್ಲಿ ಮಂಡಿಸಿದರು.
ಸಂಘದ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ ಕಲ್ಲಾಪ್ಪು, ನಿರ್ದೇಶಕರಾದ ಹರೀದಾಸ್ ಪಡಂತ್ತಾಯ ಮಲವೂರು,ದೇವಣ್ಣ ಮೂಲ್ಯ ಕೆರೆಕೋಡಿ,ರಾಜೀವ ಗೌಡ ಕಲಾಯಿತೊಟ್ಟು,ಶೇಖರ ನಾಯ್ಕ ಗೇರುಕಟ್ಟೆ,ರಾಜ್ ಪ್ರಕಾಶ್ ಶೆಟ್ಟಿ ಪಡ್ಜೈ ಲ್,ರತ್ನಾಕರ ಬಳ್ಳಿದಡ್ಡ, ಚಂದ್ರಾವತಿ ಕಟ್ಟದಬೈಲು, ಶಶಿಧರ್ ಶೆಟ್ಟಿ ಹೀರ್ಯ,ನೋಣಯ್ಯ ಕುಂಟಿನಿ, ಮಮತ ವಿ.ಆಳ್ವ ನಾಳ ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರತಿನಿಧಿ ಸಂದೇಶ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಮಾಜಿ ಅಧ್ಯಕ್ಷರು, ಉಪಾಧ್ಯಕ್ಷರು,ನಿರ್ದೇಶಕರು ಪಂಚಾಯತು ಜನಪ್ರತಿ ನಿಧಿಗಳು ವಿನ ಸಂಘ- ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಸಂಘದ ಸದಸ್ಯರು ಭಾಗವಹಿಸಿದರು.
ಸಿಬ್ಬಂದಿ ಜಗನ್ನಾಥ ಪ್ರಾರ್ಥನೆ ಮಾಡಿದರು.ಸಂಘದ ನಿರ್ದೇಶಕ ಶೇಖರ ನಾಯ್ಕ ಸ್ವಾಗತಿಸಿ,ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರೂಪಿಸಿ, ಸಿಬ್ಬಂದಿ ಸಂತೋಷ್ ಕುಮಾರ್ ಧನ್ಯವಾದವಿತ್ತರು.