

ನೆರಿಯ: ಬಜರಂಗದಳದ ಮುಖಂಡ, ವಾಗ್ಮಿ, ನವೀನ್ ನೆರಿಯ ಹರಿಣಾಕ್ಷಿಯವರೊಂದಿಗೆ 28/08/2023 ರಂದು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.
ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಟ್ರಸ್ಟಿಗಳು ಆದ ನವೀನ್ ಮತ್ತು ಹರಿಣಾಕ್ಷಿ ನವ ದಂಪತಿಗಳು ನಂದಗೋಕುಲ ಗೋಶಾಲೆಗೆ ಭೇಟಿ ನೀಡಿ ಗೋ ಪೂಜೆಯನ್ನು ನಿರ್ವಹಿಸಿ ಗೋಪಾಲಕರಿಗೆ ವಸ್ತ್ರವನ್ನು ನೀಡಿ ತನ್ನ ವಿವಾಹ ದಿನದಂದು ಸಂಗ್ರಹವಾದ ಗೋನಿಧಿ ರೂ 1,47,107 (ಒಂದು ಲಕ್ಷದ ನಲುವತ್ತೇಳು ಸಾವಿರದ ಒಂದು ನೂರ ಏಳು ) ಟ್ರಸ್ಟಿಗಳ ಸಮ್ಮುಖದಲ್ಲಿ ಹತ್ತಾಂತರಿಸಿದರು.
ಈ ಸಂದರ್ಭದಲ್ಲಿ ವಿವೇಕಾನಂದ ಸೇವಾಶ್ರಮ ಟ್ರಸ್ಟಿನ ಅಧ್ಯಕ್ಷರಾದ ಡಾ.ಎಂ.ಎಂ ದಯಾಕರ್, ಕಾರ್ಯದರ್ಶಿಗಳಾದ ಸುಬ್ರಹ್ಮಣ್ಯ ಕುಮಾರ್ ಅಗರ್ತ, ಟ್ರಸ್ಟಿಗಳಾದ ರಮೇಶ್ ಪ್ರಭು ಮತ್ತು ಗೋಶಾಲೆಯ ಸಿಬ್ಬಂದಿಗಳು ಮತ್ತು ವಿ.ಹರೀಶ್ ನೆರಿಯಾ ರವರು ಉಪಸ್ಥಿತರಿದ್ದು ದಂಪತಿಗಳಿಗೆ ಶುಭ ಹಾರೈಸಿದರು.