ಕಾಯ್ದೆಗಳ ಬಗೆಗಿನ ಅಜ್ಞಾನ ಅಪರಾಧ ಚಟುವಟಿಕೆಗಳ ಏರಿಕೆಗೆ ಕಾರಣ: ಟ್ರಾಫಿಕ್ ಎಸ್.ಐ ಅರ್ಜುನ್- ಮುಂಡಾಜೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಜಾಗೃತಿ ಕಾರ್ಯಕ್ರಮ

0

ಬೆಳ್ತಂಗಡಿ: ರಸ್ತೆ ಸುರಕ್ಷತೆ ಅಥವಾ ಇತರ ಜನಜೀವನದ ವಿಚಾರದಲ್ಲಿ ಭಾರತ ದೇಶದಲ್ಲಿ ರೂಪಿತವಾಗಿರುವ ಕಾಯ್ದೆಗಳು ಅದ್ಭುತವಾಗಿವೆ. ಆದರೆ ಅದರ ಬಗ್ಗೆ ಮಾಹಿತಿ ಕೊರತೆ ಮತ್ತು ಅದರ ಅನುಷ್ಠಾನದಲ್ಲಿ ಜನರ ನಿರ್ಲಕ್ಷ್ಯ ಈ ಪರಿ ಅಪರಾಧ ವಟುವಟಿಕೆ ಏರಲು ಕಾರಣವಾಗಿದೆ ಎಂದು ಬೆಳ್ತಂಗಡಿ ಟ್ರಾಫಿಕ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಅರ್ಜುನ್ ಹೆಚ್ ಕೆ ಹೇಳಿದರು.

ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ ಮುಂಡಾಜೆ ಇದರ‌ ವತಿಯಿಂದ ಲಯನ್ಸ್ ಕ್ಲಬ್ ಬೆಳ್ತಂಗಡಿ, ರೋಟರಿ ಕ್ಲಬ್ ಬೆಳ್ತಂಗಡಿ ಮತ್ತು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮುಂಡಾಜೆ ವಲಯದ ವತಿಯಿಂದ ಬುಧವಾರ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ನಡೆದ ರಸ್ತೆ ಸುರಕ್ಷತಾ ಮಾಹಿತಿ ಕಾರ್ಯಾಗಾರ ಮತ್ತು ಮಾದಕ ವ್ಯಸನ ಬಗ್ಗೆ ಸ್ವಾಸ್ಥ್ಯ ಜಾಗೃತಿ ಕಾರ್ಯಕ್ರಮದಲ್ಲಿ ಪ್ರಧಾನ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡುತ್ತಿದ್ದರು.

ಹೆಲ್ಮೆಟ್, ಸೀಟ್ ಬೆಲ್ಟ್‌ನಂತಹಾ ಕಾನೂನುಗಳು ಪೊಲೀಸರ ಭಯದಿಂದ ಪಾಲನೆಯಾಗುವ ಕಾಯ್ದೆಗಳಾಗದೆ ನಮ್ಮ ನಮ್ಮ ವೈಯುಕ್ತಿಕ ರಕ್ಷಣೆಗೆ ಇರುವ ಕಾಯ್ದೆಗಳಾಗಿ ಅನುಷ್ಟಾನವಾಗುವಂತಾಗಬೇಕು ಎಂದವರು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಹಿರಿಯ ಶಿಕ್ಷಕ ಅರವಿಂದ ಚೊಕ್ಕಾಡಿ, ಈ ಕಾರ್ಯಕ್ರಮದ ಮೂಲಕ ನಮ್ಮ ವಸತಿ ಶಾಲೆಗೆ ಜನ ಮತ್ತು ಸಂಘ ಸಂಸ್ಥೆಯವರ ಸಂಪರ್ಕ ವೃದ್ದಿಯಾಗಲು ವೇದಿಕೆಯಾಗಿದೆ ಎಂದರು.

ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ ಉಜಿರೆ, ರೋಟರಿ ಕ್ಲಬ್ ಕಾರ್ಯದರ್ಶಿ ವಿದ್ಯಾಕುಮಾರ್ ಕಾಂಚೋಡು, ಜನಜಾಗೃತಿ ವೇದಿಕೆಯ ಮುಂಡಾಜೆ ವಲಯಾಧ್ಯಕ್ಷ ನಾಮದೇವ ರಾವ್, ಗ್ರಾ. ಯೋಜನೆ ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ದನ ಮಾಚಾರು ಶುಭ ಕೋರಿದರು.

ಜನಜಾಗೃತಿ ವೇದಿಕೆ ತಾ. ಸಮಿತಿ ಸದಸ್ಯ ಅಶ್ರಫ್ ಆಲಿಕುಂಞಿ ಮುಂಡಾಜೆ ಪ್ರಸ್ತಾವನೆಯೊಂದಿಗೆ ಸ್ವಾಗತಿಸಿದರು. ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘದ ಕಾರ್ಯದರ್ಶಿ ಶಶಿಧರ ಠೋಸರ್ ಕಾರ್ಯಕ್ರಮ ನಿರೂಪಿಸಿದರು.

ಮೊರಾರ್ಜಿ ದೇಸಾಯಿ ವಸತಿ ಶಾಲೆಯ 6 ರಿಂದ 10 ನೇ ತರಗತಿ ವರೆಗಿನ 207 ವಿದ್ಯಾರ್ಥಿಗಳು, ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಭಾಗಿಯಾಗಿದ್ದರು.

p>

LEAVE A REPLY

Please enter your comment!
Please enter your name here