ಪ್ರೌಢ ಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟ- ಪೆರ್ಲ ಬೈಪಾಡಿ ಸ.ಪ್ರೌ.ಶಾಲಾ ಬಾಲಕರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕರ ವಾಲಿಬಾಲ್ ಪಂದ್ಯಾಟವು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆ ಧರ್ಮಸ್ಥಳದಲ್ಲಿ ಆ.23ರಂದು ಜರುಗಿತು.

ನಾಲ್ಕು ವಲಯಗಳಿಂದ 8 ತಂಡಗಳು ಆಗಮಿಸಿದ್ದು, ಈ ಪಂದ್ಯಾಟದಲ್ಲಿ ಸರ್ಕಾರಿ ಪ್ರೌಢ ಶಾಲೆ ಪೆರ್ಲ ಬೈಪಾಡಿ ಇಲ್ಲಿಯ ಬಾಲಕರ ತಂಡವು ಫೈನಲ್ ಪಂದ್ಯದಲ್ಲಿ ಸರ್ಕಾರಿ ಪ್ರೌಢ ಶಾಲೆ ಪದ್ಮುಂಜದ ತಂಡವನ್ನು ಮಣಿಸುವುದರೊಂದಿಗೆ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.

ದೈಹಿಕ ಶಿಕ್ಷಣ ಶಿಕ್ಷಕರು ಇಲ್ಲದಿದ್ದರೂ ಹಳೆವಿದ್ಯಾರ್ಥಿಯೊಬ್ಬರ ತರಬೇತಿಯಿಂದ ಈ ಸಾಧನೆ ಮಾಡಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

LEAVE A REPLY

Please enter your comment!
Please enter your name here