ಲಂಡನ್- ವೇಗದೂತ..ಶರವೇಗದ ಸರದಾರ..ಈತನ ಕಾರ್ ಚಲಾಯಿಸುವ ಸಾಮರ್ಥ್ಯಕ್ಕೆ ಇಂಗ್ಲೆಂಡ್ ನ ಪ್ರೇಕ್ಷಕರು, ಸಹ ಸ್ಪರ್ಧಿಗಳು ಅಚ್ಚರಿಗೊಂಡಿದ್ದಾರೆ.ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯ ನಿವಾಸಿಯಾಗಿರುವ ಈಗ ಇಂಗ್ಲೆಡ್ ನಲ್ಲಿ ಉದ್ಯೋಗದಲ್ಲಿರುವ ಕುಮಾರ್ ಮತ್ತು ಮಾನಸ ದಂಪತಿಯ ಪುತ್ರ ಕನಿಷ್ಕ್ ರಾವ್ ಇಂಗ್ಲೆಂಡ್ ನಲ್ಲಿ ಮಿಂಚಿನ ಸಂಚಲನದ ಮೂಲಕ ಪ್ರಖ್ಯಾತರಾಗಿದ್ದಾರೆ.12 ವರ್ಷದ ಬಾಲಕ ಕನಿಷ್ಕ್ ರಾವ್ ಫಾರ್ಮಲಾ 1ಚಾಂಪಿಯನ್ ಆಗಬೇಕೆಂಬ ಮಹತ್ವಾಕಾಂಕ್ಷೆ ಹೊಂದಿದ್ದಾರೆ.ಕಾರ್ ರೇಸಿಂಗ್ ನಲ್ಲಿ ಭಾಗಿಯಾಗುತ್ತಿರುವ ಕನಿಷ್ಕ್ ಈ ಬಾರಿ ಬ್ರಿಟೀಷ್ ನ್ಯಾಷನಲ್ ಚಾಂಪಿಯನ್ ಶಿಪ್ ರೇಸ್ ನ ನಾಲ್ಕನೇ ರೌಂಡ್ ನಲ್ಲಿ ಗೆದ್ದು ಬೀಗಿದ್ದಾರೆ.ಆಗಸ್ಟ್ 20ರಂದು ಲಂಡನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಕನಿಷ್ಕ್ ಮಿಂಚಿನ ವೇಗದಲ್ಲಿ ಚಲಿಸಿ ವಿಜೇತರಾಗಿದ್ದಾರೆ.
ಏಳು ತಿಂಗಳ ಹಿಂದೆ ಕನಿಷ್ಕ್ ತನ್ನ ತವರೂರು ಗುರುವಾಯನಕೆರೆಗೆ ಬಂದಾಗ ಸುದ್ದಿ ನ್ಯೂಸ್ ಜೊತೆ ಮಾತನಾಡಿದ್ದರು.ಅಲ್ಲದೇ, ತುಳುವಿನಲ್ಲೇ ಮಾತನಾಡಿ, ತನ್ನ ಫೆವರಿಟ್ ಫುಡ್, ರೇಸಿಂಗ್ ಆಸಕ್ತಿಗಳ ಬಗ್ಗೆಯೂ ಸುದ್ದಿಯೊಂದಿಗೆ ಮಾತನಾಡಿದ್ದರು. ಸಜ್ಜಿಗೆ ನನ್ನ ಫೆವರಿಟ್ ಅಂತ ಹೇಳಿದ್ದ ಕನಿಷ್ಕ್ ಸಂದರ್ಶನ ಹಲವರಿಂದ ಮೆಚ್ಚುಗೆಗೆ ಪಾತ್ರವಾಗಿತ್ತು.ಈಗ ಕನಿಷ್ಕ್ ಮತ್ತೊಂದು ಸಾಧನೆ ಮಾಡಿದ್ದಾರೆ.ಈ ಮೂಲಕ ನಮ್ಮ ತಾಲೂಕಿನ ಪ್ರತಿಭಾನ್ವಿತ ಬಾಲಕ, ಫಾರ್ಮುಲಾ ವನ್ ರೇಸ್ ನಲ್ಲಿ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ.
ಅಂದು ಸಜ್ಜಿಗೆ ನನ್ನ ಫೆವರಿಟ್ ಮತ್ತು ರೇಸ್ ಬಗ್ಗೆ ಕನಿಷ್ಕ್ ಮಾತಾಡಿರುವ ಸಂದರ್ಶನ ಅವರ ತುಳು ಮಾತಿನ ಶೈಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿತ್ತು.ಆ ಸಂದರ್ಶನವನ್ನು ತಾವು ಈಗಲೂ ವೀಕ್ಷಿಸಬಹುದು. ಗೂಗಲ್ ಲೆನ್ಸ್ ನಲ್ಲಿ ಈ ಕ್ಯೂ ಆರ್ ಕೋಡ್ ಸರ್ಚ್ ಮಾಡಿದರೆ ಕನಿಷ್ಕ್ ರಾವ್ ಅವರ ಸಂದರ್ಶನ ವೀಕ್ಷಿಸಬಹುದಾಗಿದೆ.