ಕೊಯ್ಯೂರು: ಬಜಿಲ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕಿಯಾದ ರೀಮಾ ಲೊಲಿಟಾ ಬಂಗೇರಾ ರವರ ಬೀಳ್ಕೊಡುಗೆ ಆ.21 ರಂದು ಬಜಿಲ ಶಾಲೆಯಲ್ಲಿ ಜರುಗಿತು.
ರೀಮಾ ಲೊಲಿಟಾ ಬಂಗೇರ ಕಳೆದ 16 ವರ್ಷಗಳ ಕಾಲ ಕೊಯ್ಯೂರು ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.ಪ್ರಸ್ತುತ ತನ್ನ ಹುಟ್ಟೂರಿನ ಉಡುಪಿ ಜಿಲ್ಲೆಯ ಹೆಜಮಾಡಿಕೊಡಿ ಎಂಬ ಶಾಲೆಗೆ ವರ್ಗಾವಣೆ ಹೊಂದಿ ಕರ್ತವ್ಯದಲ್ಲಿದ್ದಾರೆ.ಈ ಹಿನ್ನೆಲೆಯಲ್ಲಿ ಶಿಕ್ಷಕಿಯವರನ್ನು ಸನ್ಮಾನಿಸಿ ಗೌರವಿಸಿದರು.
ಕೊಯ್ಯೂರು ಗ್ರಾಮ ಪಂಚಾಯತ್ ಅಧ್ಯಕ್ಷೆ ದಯಾಮಣಿ, ಗ್ರಾಮ ಪಂಚಾಯತಿ ಸದಸ್ಯೆ ಸುಮಿತ, ಮಾಜಿ ಅಧ್ಯಕ್ಷರಾದ ದಾಮೋದರ್ ಗೌಡ ಬೆರ್ಕೆ, ಬೆಳ್ತಂಗಡಿ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ವಾರಿಜಾ, ಸ್ಥಳೀಯರಾದ ಕೂಸಪ್ಪ ಪೂಜಾರಿ ಶಿವಪ್ಪಗೌಡ, ಹಾಗೂ ಶಾಲಾಭಿವೃದ್ಧಿ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ, ಪಂಚಾಯತ್ ಉಪಾಧ್ಯಕ್ಷ ಹರೀಶ್ ಗೌಡ ಮತ್ತು ಮಾಜಿ ಅಧ್ಯಕ್ಷ ಜಗದೀಶ್ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭಹಾರೈಸಿದರು.
ಶಾಲಾ ವಿದ್ಯಾರ್ಥಿಗಳಾದ ಲತನ್, ಸಮಿತ, ಹರ್ಷಿತ, ಲಿಖಿತ, ಹಾಗೂ ಹಿರಿಯ ವಿದ್ಯಾರ್ಥಿ ಯೋಕ್ಷಿತ,ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಸದಸ್ಯರು,ಸಹ ಶಿಕ್ಷಕಿಯರು ವರ್ಗಾವಣೆಗೊಂಡ ಶಿಕ್ಷಕಿಯವರ ಬಗ್ಗೆ ಗುಣಗಾನ ಮಾಡಿದರು.
ಸನ್ಮಾನ ಗೊಂಡ ರೀಮಾ ಲೊಲಿಟ ಬಂಗೇರಾ ತನ್ನ ನೆನಪಿನ ಕಾಣಿಕೆಯಾಗಿ ಶಾಲೆಗೆ ಬ್ಯಾಂಡ್ ಸೆಟ್ ನ್ನು ಕೊಡುಗೆಯಾಗಿ ನೀಡಿದರು.ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು, ಮಕ್ಕಳ ಪೋಷಕರು,ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹಾಗೂ ಶಾಲಾ ಪೋಷಕರು ಬಾಗವಹಿಸಿದ್ದರು.
ಮುಖ್ಯ ಶಿಕ್ಷಕಿ ಜಯಶ್ರೀ ಕೆ ಸ್ವಾಗತಿಸಿದರು.ಭರತ್ ಗೌಡ ಡೆಂಬುಗ ಕಾರ್ಯಕ್ರಮ ನಿರೂಪಿಸಿದರು.ಗೌರವ ಶಿಕ್ಷಕಿ ಕುಸುಮಾ ಧನ್ಯವಾದವಿತ್ತರು.