ಬೆಳ್ತಂಗಡಿ: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ ಉಜಿರೆ ಹಳೆಪೇಟೆ ಸಮಿತಿ ವತಿಯಿಂದ 77ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ “ಪ್ರತಿಯೊಬ್ಬ ಕಾರ್ಮಿಕನೂ ಸ್ವಾತಂತ್ರ್ಯದ ರಕ್ಷಕರಾಗಲಿ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯಕ್ರಮ ಅಧ್ಯಕ್ಷರಾದ ಬಶೀರ್ ಅತ್ತಾಜೆ ಅವರ ಅಧ್ಯಕ್ಷತೆಯಲ್ಲಿ ಹಳೆಪೇಟೆ ಟಿ-ಬಿ ಕ್ರಾಸ್ ಬಳಿ ನಡೆಯಿತು.
77ನೇ ಸ್ವಾತಂತ್ರ್ಯ ದಿನಾಚರಣೆ ದ್ವಜಾರೋಹಣವನ್ನು ಬೆಳ್ತಂಗಡಿ ಸಂಚಾರಿ ಪೊಲೀಸ್ ಠಾಣಾಧಿಕಾರಿ ಅರ್ಜುನ್ ಅವರು ನೆರವೇರಿಸಿ ಸ್ವಾತಂತ್ರ್ಯ ದಿನದ ಮಹತ್ವದ ಬಗ್ಗೆ ಮಾತನಾಡಿದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾರ್ಮಿಕರ ತೊಡಗುವಿಕೆಯ ಬಗ್ಗೆ ಮತ್ತು ಹೋರಾಟಗಳ ಬಗ್ಗೆ ಎಸ್‌ಡಿಟಿಯು ರಾಜ್ಯ ನಾಯಕರಾದ ಖಾದರ್ ಫರಂಗಿಪೇಟೆ ಯವರು ಪ್ರಸ್ತಾವಿಕ ಭಾಷಣ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಹಳೆಪೇಟೆ ಮುಹಿಯುದ್ದಿನ್ ಜುಮ್ಮಾ ಮಸೀದಿ ಖತಿಬಾರದ ಅಬುಸ್ವಾಲಿ ಕಾಮಿಲ್ ಸಖಾಫಿ, ಉದ್ಯಮಿ ಪಾಂಡುರಂಗ ಭಂಡಾರ್ಕರ್, ಬೆಳ್ತಂಗಡಿ ತಾಲೂಕು ಘಟಕ ಅಧ್ಯಕ್ಷರಾದ ಸಾಲಿ ಮದ್ದಡ್ಕ, ಕಾರ್ಯದರ್ಶಿ ರಿಯಾಜ್ ಪನಕಜೆ, ಸೂರಪ್ಪ, ಸುರೇಶ್, ಲತೀಫ್ ಉಜಿರೆ, ಲಾಯಿಲ ಪಂಚಾಯತ್ ಸದಸ್ಯರಾದ ಶಮಾ ಆಲಿ, ಮರಿಯಮ್ಮ ಸಲೀಮ್ ಕುಂಟಿನಿ, ಎಸ್‌ಡಿಟಿಯು ಪದಾಧಿಕಾರಿಗಳು ಮತ್ತು ಉಜಿರೆ ಹಳೆಪೇಟೆ ರಿಕ್ಷಾ ಚಾಲಕರು ಮಾಲಕರು ಉಪಸ್ಥಿತರಿದ್ದರು.
ಬೆಳ್ತಂಗಡಿ ತಾಲೂಕು ಸಮಿತಿ ಸದಸ್ಯ ಸಾಹುಲ್ ಉಜಿರೆ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದಗೈದರು.