ತಣ್ಣೀರುಪಂತ: ಆ.7ರಂದು ಸುಗಮ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ “ಆಟಿಡೊಂಜಿ ದಿನ ” ಕಾರ್ಯಕ್ರಮವನ್ನು ಕಲ್ಲೇರಿ-ತಣ್ಣೀರುಪಂತ ಬಾಪೂಜಿ ಕೇಂದ್ರದಲ್ಲಿ ಜರುಗಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷರಾದ ಸವಿತಾರವರು ವಹಿಸಿದ್ದರು.
ಈ ಕಾರ್ಯಕ್ರಮದ ಉದ್ಘಾಟನೆಯನ್ನು ನಮ್ಮ ಊರಿನ ಹಿರಿಯ ಕೃಷಿಕರಾದ ಲಕ್ಷ್ಮಣ ಶೆಟ್ಟಿಯವರು ನೆರವೇರಿಸಿದರು.ಮುಖ್ಯ ಅತಿಥಿಗಳಾಗಿ ಪಂಚಾಯತ್ ನ ಅಧ್ಯಕ್ಷ ಫಾತಿಮಾ ಇಶ್ರತ್, ತಾಲೂಕು ಕಾರ್ಯಕ್ರಮ ವ್ಯವಸ್ಥಪಕ ಪ್ರತಿಮಾ, ಕರಾಯ ಭಜನಾ ಮಂಡಳಿಯ ಅಧ್ಯಕ್ಷ ಜಗದೀಶ್ ಶೆಟ್ಟಿ, ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ, ಕಾರ್ಯದರ್ಶಿ ಆನಂದ್, ವಲಯ ಮೇಲ್ವಿಚಾರಕ ಜಯಾನಂದ್, ಬ್ಲಾಕ್ ಮ್ಯಾನೇಜರ್ ನಿತೀಶ್, ವಲಯ ಮೇಲ್ವಿಚಾರಕ ಸ್ವಸ್ತಿಕ್ ಜೈನ್, ವೀಣಾಶ್ರೀ ಉಪಸ್ಥಿತರಿದ್ದರು.
ಪ್ರಸ್ತಾವಿಕ ಮಾತನಾಡಿದ ವಲಯ ಮೇಲ್ವಿಚಾರಕ ಜಯಾನಂದ್ ತುಳುನಾಡಿನಲ್ಲಿ ಆಚರಿಸುತ್ತಿರುವ ಆಟಿಡೊಂಜಿ ಕಾರ್ಯಕ್ರಮದ ಸವಿ ವಿವರಣೆ ನೀಡಿದರು.ಪಂಚಾಯತ್ ನ ಅಧ್ಯಕ್ಷ ಫಾತಿಮಾ ಇಶ್ರತ್ ಆಟಿಡೊಂಜಿ ದಿನ ಕಾರ್ಯಕ್ರಮದ ವಿಶಿಷ್ಟತೆಯ ಬಗ್ಗೆ ವಿವರಿಸಿದರು.
ತಾಲೂಕು ವ್ಯವಸ್ಥಾಪಕರಾದ ಪ್ರತಿಮಾ ಮಾತನಾಡಿ ಹಿಂದಿನ ಕಾಲದಲ್ಲಿ ಆಟಿ ತಿಂಗಳ ಕಾರ್ಯವೈಖರಿಯ ಬಗ್ಗೆ ತಿಳಿಸಿಕೊಟ್ಟರು.ಭಜನಾ ಮಂಡಳಿಯ ಅಧ್ಯಕ್ಷರಾದ ಜಗದೀಶ್ ಶೆಟ್ಟಿ ಆಟಿ ತಿಂಗಳ ಜೀವನ ಶೈಲಿ ಕುರಿತು ವಿವರಣೆ ನೀಡಿದರು.ಪಂಚಾಯತ್ ನ ಅಭಿವೃದ್ಧಿ ಅಧಿಕಾರಿ ಪುಟ್ಟಸ್ವಾಮಿ ಮಾತನಾಡಿ ಆಟಿಡೊಂಜಿ ಕಾರ್ಯಕ್ರಮದ ಬಗ್ಗೆ ಮಾತನಾಡಿ ಇನ್ನು ಮುಂದೆಯೂ ಕಾರ್ಯಕ್ರಮ ನಡೆಸಲು ಸಹಕಾರ ನೀಡುವುದಾಗಿ ಭರವಸೆ ಕೊಟ್ಟರು.
ಜಯವಿಕ್ರಮ್ ಪಂಚಾಯತ್ ನ ಮಾಜಿ ಅಧ್ಯಕ್ಷರು ಮಾತನಾಡಿ ಆಟಿ ತಿಂಗಳ ಜೀವನ ಶೈಲಿ ಬಗ್ಗೆ ವಿವರಿಸಿದರು.
ವೇದಿಕೆಯಲ್ಲಿ ಹಿರಿಯ ಕೃಷಿಕಾರದ ಲಕ್ಷ್ಮಣ ಶೆಟ್ಟಿ, ನಾಟಿ ವೈಧ್ಯಾರಾದ ಸೂರಪ್ಪ ಪೂಜಾರಿ, ಹಿರಿಯ ಕೃಷಿಕರಾದ ನಾರಾಯಣ ಶೆಟ್ಟಿ ಇವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಒಕ್ಕೂಟದ ಉಪಾಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಒಕ್ಕೂಟದ ಪದಾಧಿಕಾರಿಗಳು, ಎಂಬಿಕೆ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳು, ಪಶು ಸಖಿ, ಕೃಷಿ ಸಖಿ, ಕೃಷಿ ಉದ್ಯೋಗ ಸಖಿ ಹಾಗೂ ಸಂಜೀವಿನಿ ಹಾಗೂ ಸ್ತ್ರೀಶಕ್ತಿ ಗುಂಪಿನ ಸದಸ್ಯರು ಆಶಾ ಕಾರ್ಯಕರ್ತೆಯರು ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.