ಶಿಬಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ರತ್ನ, ಉಪಾಧ್ಯಕ್ಷರಾಗಿ ದಿನಕರ ಕುರುಪ್ ಅವಿರೋಧ ಆಯ್ಕೆ

0

ಶಿಬಾಜೆ:ಪಂಚಾಯತ್ ಅಧ್ಯಕ್ಷ ಸ್ಥಾನ ವಾರ್ಡ್ ನಂಬರ್ 213ರ ಸದಸ್ಯೆ ರತ್ನ ಮತ್ತು ವಾರ್ಡ್ ನಂಬರ್ 212 ರ ಸದಸ್ಯ ದಿನಕರ್ ಕುರುಪ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾ ಪ್ರಕ್ರಿಯೆಗೆ ಚುನಾವಣಾಧಿಕಾರಿ ಎ ಪಿ ಎಂಸಿ ಕಾರ್ಯದರ್ಶಿ ರವೀಂದ್ರ ಹಾಗೂ ಇವರಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್ ಸಹಕರಿಸಿದರು.

ತದನಂತರ ನಡೆದ ಸಭೆಯಲ್ಲಿ ಬಿಜೆಪಿ ಯ ಹಿರಿಯ ನಾಯಕರು ಹಾಗೂ ಮಂಡಲ ಉಪಾಧ್ಯಕ್ಷರಾದ ಕೊರಗಪ್ಪ ಗೌಡ ಮಹಾಶಕ್ತಿ ಕೇಂದ್ರದ ಕರುಣಾಕರ ಶಿಶಿಲ ಓಬಯ್ಯ ಗೌಡ ಹಾಗೂ ನಿಕಟ ಪೂರ್ವ ಉಪಾಧ್ಯಕ್ಷ ವಿನಯ ಚಂದ್ರ ಟಿ .ಸದಸ್ಯರಾದ ವನಿತಾ ವಿ ಶೆಟ್ಟಿಗಾರ್ ಯಮುನಾ ಉಪಸ್ಥಿತರಿದ್ದು ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಅಭಿನಂದಿಸಿದರು.ನಂತರ ಹಿರಿಯರಾದ ಪುರಂದರ ರಾವ್ ಅವರು ನೂತನ ಅಧ್ಯಕ್ಷ ಉಪಾಧ್ಯಕ್ಷರಿಗೆ ಸಲಹೆ ನೀಡಿದರು.

LEAVE A REPLY

Please enter your comment!
Please enter your name here