ಪಡಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ಪ್ರಶಾಂತ್ ಸುವರ್ಣ, ಉಪಾಧ್ಯಕ್ಷರಾಗಿ ಪಿ.ಎನ್.ವಸಂತಿ

0

ಪಡಂಗಡಿ: ಪಡಂಗಡಿ ಗ್ರಾಮ ಪಂಚಾಯತ್ ನ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮುಂದಿನ ಎರಡೂವರೆ ವರ್ಷದ ಅವಧಿಗೆ ಬಿಜೆಪಿ ಬೆಂಬಲಿತ ಪ್ರಶಾಂತ್ ಸುವರ್ಣ ಹಾಗೂ ಉಪಾಧ್ಯಕ್ಷರಾಗಿ ಪಿ.ಎನ್.ವಸಂತಿ ಅವಿರೋಧವಾಗಿ ಆಯ್ಕೆಯಾದರು.

ಇಲ್ಲಿ 17 ಸದಸ್ಯರ ಬಲ ಇದ್ದುಎಲ್ಲಾ ಸದಸ್ಯರು ಬಿಜೆಪಿ ಬೆಂಬಲಿತರು. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ ಗೆ ಮೀಸಲಾಗಿದ್ದು ಗರ್ಡಾಡಿ 1ನೇ ಕ್ಷೇತ್ರದ ಪ್ರಶಾಂತ್ ಪೂಜಾರಿ ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿಯಾಗಿದ್ದು ಪಡಂಗಡಿ 3 ನೇ ಕ್ಷೇತ್ರದ ಪಿ.ಎನ್.ವಸಂತಿ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಸಾಮಾಜಿಕ ಅಧಿಕಾರಿ ಅಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷ ಪ್ರಕ್ರಿಯೆ ನಡೆಸಿದರು.ಪಿಡಿಒ ಸಫನಾ ಕಾರ್ಯದರ್ಶಿ ತಾರಾನಾಥ ನಾಯ್ಕ, ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here