ಉಜಿರೆ: ವಾಣಿಜ್ಯ ಮತ್ತು ಕೈಗಾರಿಕಾ ಸಂಘ ಉಜಿರೆ ಇದರ ಮಹತ್ವದ ಸಭೆ ಆ.5ರಂದು ಉಜಿರೆಯ ರಾಮಕೃಷ್ಣ ಸಭಾಮಂಟಪದಲ್ಲಿ ನಡೆಯಿತು.ರಾಷ್ಟ್ರೀಯ ಹೆದ್ದಾರಿಯ ಕಾಮಾಗಾರಿ ಈ ಸಂದರ್ಭದಲ್ಲಿ ನಡೆಯುತ್ತಿದ್ದು ಹೆದ್ದಾರಿಯ ಬದಿಯಲ್ಲಿ ಸರ್ವೀಸ್ ರೋಡ್ ನಿರ್ಮಿಸಿದಲ್ಲಿ ವ್ಯಾಪಾರವನ್ನೆ ನಂಬಿ ಜೀವಿಸುತ್ತಿರುವ ವರ್ತಕರ ಜೀವನ ಬೀದಿಗೆ ಬೀಳುವ ಸಾಧ್ಯತೆ ಇದೆ.ಆದ್ದರಿಂದ ರಸ್ತೆ ಅಗಲೀಕರಣ ಆಗಬೇಕಾದದ್ದೆ, ಅದಕ್ಕೆ ಉಜಿರೆ ವರ್ತಕರ ಸಹಕಾರ ಸದಾ ಇದೆ.ಆದರೆ ಸರ್ವೀಸ್ ರೋಡನ್ನು ಮಾಡದೇ ರಸ್ತೆ ಅಗಲೀಕರಣ ಮಾಡಿ ಎಂಬ ಮನವಿಯನ್ನು ಸಂಬಂದ ಪಟ್ಟ ಇಲಾಖೆಗೆ ಸಲ್ಲಿಸುವುದೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು ಮತ್ತು ಸರಿಯಾದ ಪಾರ್ಕಿಂಗ್ ನಿರ್ಮಿಸಿಕೊಡಬೇಕಾಗಿಯು ಮನವಿ ನೀಡುವುದು.
ಸೆಪ್ಟಂಬರ್ ತಿಂಗಳ 10 ನೇ ತಾರೀಕು ಉಜಿರೆ ವರ್ತಕರಿಗಾಗಿ ಕ್ರೀಡಾಕೂಟ ಆಯೋಜಿಸುವುದು, ಸೆಪ್ಟಂಬರ್ 24 ನೇ ತಾರೀಕು ಸಂಘದ ಮಹಾಸಭೆಯನ್ನು ನಡೆಸುವುದು ಮತ್ತು ಉಜಿರೆ ವರ್ತಕ ಸಂಘದ ನೂತನ ಸಮಿತಿಯನ್ನು ರಚನೆ ಮಾಡುವುದುಎಂದು ಸಂಘ ತೀರ್ಮಾನಿಸಿತು.
ಸಭೆಯಲ್ಲಿ ಅಧ್ಯಕ್ಷರಾದ ಅರವಿಂದ್ ಕಾರಂತ್, ಕಾರ್ಯದರ್ಶಿಗಳಾದ ಪ್ರಸಾದ್ ಬಿ ಎಸ್ ರಮ್ಯಾ 1 ಗ್ರಾಮ್ ಗೋಲ್ಡ್, ವಿಶ್ವನಾಥ ಭಂಡಾರಿ ದುರ್ಗ ಮೊಬೈಲ್, ಉಪಾಧ್ಯಕ್ಷರಾದ ದಿನೇಶ್ ದಿಶ, ಪ್ರವೀಣ್ ಹಳ್ಳಿಮನೆ, ಹುಕುಂ ರಾಮ್ ಶಾರದಾ, ಹರೀಶ್ ಕುಮಾರ್ ಆಶಿಕ, ಹಾಗೂ ಇನ್ನಿತರ ವರ್ತಕರು ಉಪಸ್ಥಿತರಿದ್ದರು.ಉಪಾಧ್ಯಕ್ಷರಾದ ಪ್ರಶಾಂತ್ ಜೈನ್ ಅಮೃತ್, ಮಹಾವೀರ ಟೆಕ್ಸ್ ಟೈಲ್ಸ್ ಮಾಲಕ ಪ್ರಭಾಕರ್ ಹೆಗಡೆ ಉಪಸ್ಥಿತರಿದ್ದರು.