ಕಳಿಯ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ದಿವಾಕರ ಮೆದಿನ, ಉಪಾಧ್ಯಕ್ಷೆಯಾಗಿ ಇಂದಿರಾ ಬಿ ಶೆಟ್ಟಿ ಆಯ್ಕೆ

0

ಗೇರುಕಟ್ಟೆ : ಕಳಿಯ ಗ್ರಾಮ ಪಂಚಾಯತ್ ನಲ್ಲಿ ಮುಂದಿನ ಎರಡೂವರೆ ವರ್ಷಗಳಿಗೆ ಅಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ನಿಗದಿಯಾದ್ದು, ಬಿಜೆಪಿ ಬೆಂಬಲಿತ ಅಧ್ಯಕ್ಷರಾಗಿ ದಿವಾಕರ ಮೆದಿನ ಹಾಗೂ ಉಪಾಧ್ಯಕ್ಷೆಯಾಗಿ ಸಾಮಾನ್ಯ ಮಹಿಳೆ ಇಂದಿರಾ ಬಿ.ಶೆಟ್ಟಿ ಯವರು ಚುನಾವಣೆ ಮೂಲಕ ಆಯ್ಕೆಯಾದರು.ಚುನಾವಣಾ ಪ್ರಕ್ರಿಯೆ ಆ.5.ರಂದು ಕಳಿಯ ಪಂಚಾಯತು ಸಭಾಭವನದಲ್ಲಿ ನಡೆಯಿತು.

ಚುನಾವಣಾಧಿಕಾರಿಯಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಚಂದ್ರಶೇಖರ್ ಕೆ.ಎಸ್.ಭಾಗವಹಿಸಿದ್ದರು.ಕಳಿಯ ಗ್ರಾಮ ಪಂಚಾಯತು ಅಭಿವೃದ್ಧಿ ಅಧಿಕಾರಿ ಸಂತೋಷ್ ಪಾಟೀಲ್, ಕಾರ್ಯದರ್ಶಿ ಕುಂಇ್ ಕೆ.ಸಹಕರಿಸಿದರು.

ಕಳಿಯ ಗ್ರಾಮ ಪಂಚಾಯತು ಪ್ರಸ್ತುತ ಅಧ್ಯಕ್ಷೆ ಸುಭಾಷಿಣಿ ಜನಾರ್ದನ ಗೌಡ ಕೆ, ಉಪಾಧ್ಯಕ್ಷೆ ಕುಸುಮ ಎನ್.ಬಂಗೇರ, ಸದಸ್ಯರಾದ ಸುಧಾಕರ ಮಜಲು,ವಿಜಯ ಕುಮಾರ್ ಗೌಡ ಕಲಾಯಿತೊಟ್ಟು, ಯಶೋಧರ ಶೆಟ್ಟಿ ಕೊರಂಜ,ಅಬ್ದುಲ್ ಕರೀಂ ಕೆ.ಎಮ್.ಗೇರುಕಟ್ಟೆ, ಹರೀಶ್ ಕುಮಾರ್ ಬಿ.ಬೆರ್ಕೆತೊಡಿ, ಲತೀಫ್ ಪರೀಮ, ಮೋಹಿನಿ ಹಾಕೋಟೆ, ಮರೀಟಾ ಪಿಂಟೊ, ಪುಷ್ಪ ನಾಳ, ಶ್ವೇತಾ ಶ್ರೀನಿವಾಸ್ ಬೆರ್ಕೆತ್ತೋಡಿ, ಶಕುಂತಲಾ ಖಂಡಿಗ ಉಪಸ್ಥಿತರಿದ್ದು, ಬಿಜೆಪಿ ಬೆಂಬಲಿತ 8 ಸದಸ್ಯರು, ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಚುನಾವಣೆಯಲ್ಲಿ ಭಾಗಿಯಾದರು.
ಕಳಿಯ ಸಿ.ಎ.ಬ್ಯಾಂಕ್ ಅಧ್ಯಕ್ಷ ವಸಂತ ಮಜಲು, ನಿರ್ದೇಶಕ, ಕಳಿಯ ಬಿಜೆಪಿ ಶಕ್ತಿಕೇಂದ್ರ ಅಧ್ಯಕ್ಷ ಶೇಖರ ನಾಯ್ಕ, ಕಳಿಯ ಶಕ್ತಿಕೇಂದ್ರ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಬೆಳ್ತಂಗಡಿ ವಾಣಿ ಶಿಕ್ಷಣ ಸಂಸ್ಥೆ ಕೋಶಾಧಿಕಾರಿ ಬಾಲಕೃಷ್ಣ ಗೌಡ ಬಿರ್ಮೋಟ್ಟು, ಬೆಳ್ತಂಗಡಿ ಸಹಕಾರ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ, ಗೇರುಕಟ್ಟೆ ಹಾಲು ಸಂಘದ ಅಧ್ಯಕ್ಷ ಜನಾರ್ಧನ ಗೌಡ ಕೆ, ನಿರ್ದೇಶಕ ಗಂಗಯ್ಯ ಗೌಡ, ಕಳಿಯ ಗ್ರಾಮದ ಪಂಚಾಯತು ಮಾಜಿ ಅಧ್ಯಕ್ಷ ತುಕಾರಾಮ ಪೂಜಾರಿ, ಬಿಜೆಪಿ ಪಕ್ಷದ ಪ್ರಮುಖರು,ಪಂಚಾಯತು ಸಿಬ್ಬಂದಿಗಳಾದ ಸುಚಿತ್ರಾ, ರವಿ ಹೆಚ್,ಸುರೇಶ್ ಕುಮಾರ್, ಶಶಿಕಲಾ, ನಂದಿನಿ, ಮಾನಸ ಭಾಗವಹಿಸಿದರು.

ಬಿಜೆಪಿ ಪಕ್ಷದ ಬೆಂಬಲಿತ ಅಧ್ಯಕ್ಷ ಅಭ್ಯರ್ಥಿ ಸ್ಥಾನಕ್ಕೆ ಹಿಂದುಳಿದ ವರ್ಗ ಎ.ನಿಗದಿಯಂತೆ ದಿವಾಕರ ಮೆದಿನ, 8 ಮತಗಳನ್ನು ಪಡೆದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸ್ಥಾನಕ್ಕೆ ಅಬ್ದುಲ್ ಕರೀಂ 7 ಮತಗಳನ್ನು ಪಡೆದರು.
ಬಿಜೆಪಿ ಪಕ್ಷದ ಬೆಂಬಲಿತ ಅಭ್ಯರ್ಥಿ ಉಪಾಧ್ಯಕ್ಷೆ ಸ್ಥಾನಕ್ಕೆ ಇಂದಿರಾ ಬಿ ಶೆಟ್ಟಿ, 8 ಮತಗಳನ್ನು ಪಡೆದರು.ಕಾಂಗ್ರೆಸ್ ಪಕ್ಷದ ಬೆಂಬಲಿತ ಉಪಾಧ್ಯಕ್ಷೆ ಸ್ಥಾನಕ್ಕೆ ಮೋಹಿನಿ ಗೌಡ 7 ಮತಗಳನ್ನು ಪಡೆಚುನಾವಣೆಯಲ್ಲಿ ಮತ್ತು ಉಪಾಧ್ಯಕ್ಷೆ ಚುನಾವಣೆಯಲ್ಲಿ ಕೇವಲ 1 ಮತದ ಅಂತರದಲ್ಲಿ ಬಿಜೆಪಿ ಬೆಂಬಲಿತ ಪಕ್ಷದ ಪಾಲಾಗಿದೆ.

p>

LEAVE A REPLY

Please enter your comment!
Please enter your name here