ಕಕ್ಯಪದವು: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಯ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ “ಸ್ಮಾರ್ಟ್ ಕಾರ್ಡ್ ಬಳಕೆಯ ಮಾಹಿತಿ ಕಾರ್ಯಗಾರ”

0

ಕಕ್ಯಪದವು: ಪಾದೆಗುತ್ತು ಲಿಂಗಪ್ಪ ಮಾಸ್ಟರ್ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ನಡೆಸುತ್ತಿರುವ ಎಲ್.ಸಿ.ಆರ್. ಇಂಡಿಯನ್ ಪದವಿ ಕಾಲೇಜಿನ ಬಿ.ಕಾಂ. ವಿಭಾಗದ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕಾರ್ಡ್ ಬಳಕೆಯ ಕುರಿತು ಆ.8ರಂದು ಉಪನ್ಯಾಸಕರಾದ ರೂಪಾಕ್ಷಿ ಮತ್ತು ಚೈತ್ರ ಅವರು ಕಾರ್ಯಗಾರ ನಡೆಸಿದರು.

ಈ ಕಾರ್ಯಗಾರದಲ್ಲಿ ಸ್ಮಾರ್ಟ್ ಕಾರ್ಡುಗಳ ಸುರಕ್ಷಿತ ಬಳಕೆ ಮತ್ತು ಡೇಟಾ ಸಂಗ್ರಹಣೆ, ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಗಳ ಡಿಜಿಟಲ್ ಯುಗದಲ್ಲಿ ಆಗುವಂತಹ ಪ್ರಯೋಜನಗಳು, ಆನ್ಲೈನ್ ವಹಿವಾಟುಗಳ ಕುರಿತು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಸಂಸ್ಥೆಯ ಸಂಯೋಜಕ ಯಶವಂತ ಜಿ. ನಾಯಕ್, ಪದವಿ ವಿಭಾಗದ ಮುಖ್ಯಸ್ಥೆ ದೀಕ್ಷಿತಾ ಹಾಗೂ ಉಪನ್ಯಾಸಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here