ವೇಣೂರು: ಜು.23ರಂದು ವೇಣೂರು ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಮೂಡುಕೋಡಿ ಉಂಬೆಟ್ಟು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಚ್ಛತೆ ಹಾಗೂ ತರಕಾರಿ ತೋಟ ರಚನೆ ಬಸಳೆ ಚಪ್ಪರ ಮತ್ತು ತೊಂಡೆಕಾಯಿ ಚಪ್ಪರ ಹಾಗೂ ಬೀಜ ಬಿತ್ತನೆ ಮಾಡಲಾಯಿತು.
ಸ್ವಯಂ ಸೇವಕರಾದ ನಳಿನಾಕ್ಷಿ, ವನಿತಾ, ಗೀತಾ, ಮೀನಾಕ್ಷಿ, ಸದಾನಂದ, ಕೃಷ್ಣಪ್ಪ, ಹರೀಶ್ ಕೆ, ಜಯಂತಿ, ಸುನೀತಾ ಸೇವಾಪ್ರತಿನಿಧಿ ಮೂಡುಕೋಡಿ ಭಾಗವಹಿಸಿದರು.
ಶಾಲೆಯ ವತಿಯಿಂದ ಅಚ್ಚು ಕಟ್ಟಾದ ಉಪಹಾರದ ವ್ಯವಸ್ಥೆ ಇತ್ತು.ಬೆಳಿಗ್ಗೆ 9 ರಿಂದ ಮದ್ಯಾಹ್ನ 1 ಗಂಟೆ ವರೆಗೆ ಶ್ರಮದಾನ ಮಾಡಲಾಯಿತು.ಜ್ಞಾನವಿಕಾಸದ ಸಮನ್ವಯ ಅಧಿಕಾರಿ ಹರಿಣಿ ಹಾಗೂ ಶಾಲೆಯ ಉಪದ್ಯಾಯರು ರವಿ ಉಪಸ್ಥಿತರಿದ್ದರು.
p>