ಅಳದಂಗಡಿ: ಜು.23ರಂದು ಸುರಿದ ಭೀಕರ ಮಳೆ ಹಾಗೂ ಬೀಸಿದ ಗಾಳಿಗೆ ಗುರುವಾಯನಕೆರೆ ಕಾರ್ಕಳ ರಾಜ್ಯ ಹೆದ್ದಾರಿಯ ನಾವರ ಗೋಳಿಕಟ್ಟೆ ಮೋನುಎಂಬವರ ಮನೆಯ ಸಮೀಪ ಹೆಮ್ಮರವೊಂದು ತಡರಾತ್ರಿ ಧರಾಶಾಹಿಯಾಗಿದ್ದು ವಾಹನ ಸಂಚಾರಕ್ಕೆ ತಡೆಯಾಗಿ, ರಸ್ತೆಯ ಎರಡೂ ಕಡೆಬಹಳ ದೂರದ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಸ್ಥಳೀಯರಿಂದ ಮಾಹಿತಿ ದೊರೆತಕ್ಷಣ ಬೆಳಿಗ್ಗೆ 5:00 ಗಂಟೆಗೆ ಸ್ವಯಂಸೇವಕರಾದ ಶುಭಕರ್ ಪೂಜಾರಿ ಅವರು ಸಹ ಸ್ವಯಂಸೇವಕರಾದ ಯಜ್ಞೇಶ್ ದಿನೇಶ್ ಪ್ರವೀಣ್ ಹಾಗೂ ಸುರೇಶ್ ಅವರನ್ನು ಒಡಗೂಡಿ ಸ್ಥಳೀಯ ಯುವಕರೊಂದಿಗೆ ಮರ ತೆರವುಗೊಳಿಸಿ ವಾಹನ ಸಂಚಾರ ಸುಗಮವಾಗುವಲ್ಲಿ ಸಹಕರಿಸಿದರು ನಾರಾವಿ ಘಟಕದ ಸಂಯೋಜಕ ಶ್ರೀ ದಿನೇಶ್ ರವರು ಸಹಕರಿಸಿದರು.
p>