ನಾರಾವಿ: ನಾರಾವಿ ಹಾಲು ಉತ್ಪಾದಕರ ಸಹಕಾರಿ ಸಂಘ (ನಿ) ನಾರಾವಿ ಇದರ ಮುಂದಿನ 5 ವರ್ಷಗಳ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜು.4ರಂದು ನೆರವೇರಿತು.
ಸಂಘದ ನೂತನ ಅಧ್ಯಕ್ಷರಾಗಿ ದಯಾನಂದ ಕೋಟ್ಯಾನ್ , ಉಪಾಧ್ಯಕ್ಷರಾಗಿ ಭಾಸ್ಕರ ಹೆಗ್ಡೆ ಇವರುಗಳು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಸಿಪ್ರಿಯನ್ ಪಿರೇರಾ, ಮೆಲ್ವಿನ್ ಡಿಸೋಜಾ, ಶೇಖರ್ ಹೆಗ್ಡೆ, ಸುಚೇಂದ್ರ ಜೈನ್, ರಾಘವ ಹೆಗ್ಡೆ, ಸುರೇಖಾ, ಸುನಿಲ್ ಡಿಸೋಜಾ, ವಿಠಲ ಮಲೆಕುಡಿಯ, ವಿನಯ ಲೋಬೊ, ಕಿಟ್ಟು ಮತ್ತು ವಿನೋದ ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
p>